ಅಮೆರಿಕಾ ಒತ್ತಡಕ್ಕೆ ಮಣಿಯಿತೇ ಮೋದಿ ಸರ್ಕಾರ….?

 ನವದೆಹಲಿ:

   ಸುಂಕ ಕಡಿತಕ್ಕೆ ಭಾರತ ಒಪ್ಪಿಕೊಂಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ದೊಡ್ಡ ಸಂಚಲವನ್ನು ಸೃಷ್ಟಿಸಿದೆ.

   ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, “ಭಾರತದ ಸುಂಕ ದರಗಳು ಅಸಹನೀಯವಾಗಿವೆ. ಭಾರತದ ಸುಂಕ ದರಕ್ಕೆ ಪ್ರತಿಯಾಗಿ ಅಮೆರಿಕವೂ ಸುಂಕ ದರ ಹೆಚ್ಚಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದ್ದಾರೆ.

   ಭಾರತ ನಮ್ಮ ಮೇಲೆ ಭಾರಿ ಸುಂಕ ವಿಧಿಸುತ್ತದೆ. ಈ ಬೃಹತ್ ಪ್ರಮಾಣದ ಸುಂಕದಿಂದ ಅದು ದ್ವಿಪಕ್ಷೀಯ ವ್ಯಾಪಾರದಲ್ಲಿ ಭಾರೀ ಲಾಭ ಗಳಿಸುತ್ತಿದೆ. ಭಾರತಕ್ಕೆ ನೀವು ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತ ಈಗ ಅಮೆರಿಕದ ಪ್ರತಿ ಸುಂಕ ನೀತಿಗೆ ಹೆದರಿ ತನ್ನ ಸುಂಕ ದರಗಳನ್ನು ಕಡಿಮೆ ಮಾಡಲು ಮುಂದಾಗಿದೆ. ನಾವು ಅವರ ಅನ್ಯಾಯಯುತ ಸುಂಕ ನೀತಿಯನ್ನು ಬಹಿರಂಗಪಡಿಸುತ್ತೇವೆ ಎಂಬ ಭಯದಲ್ಲಿ ಅವರು ಸುಂಕ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದ್ದಾರೆಂದು ತಿಳಿಸಿದ್ದಾರೆ.

   ಮುಂದಿನ ತಿಂಗಳುಗಳಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಪ್ರಯತ್ನವನ್ನು ಟೆಸ್ಲಾ ನಡೆಸುತ್ತಿದ್ದು, ಶೂನ್ಯ ಸುಂಕದ ನಿರೀಕ್ಷೆಯಲ್ಲಿದೆ. ಇದರ ನಡುವಲ್ಲೇ ಟ್ರಂಪ್ ಅವರ ಈ ಹೇಳಿಕೆ ಹಲವು ಚರ್ಚೆಗಳನ್ನು ಹುಟ್ಟುಹಾಕುವಂತೆ ಮಾಡಿದೆ. ಭಾರತ ಪ್ರಸ್ತುತ ಶೇಕಡ 110ರಷ್ಟು ಆಮದು ಸುಂಕವನ್ನು ವಾಹನಗಳ ಆಮದಿನ ಮೇಲೆ ವಿಧಿಸುತ್ತಿದೆ. ಇದನ್ನು ಟೆಸ್ಲಾ ಸಿಇಓ ಎಲಾನ್ ಮಸ್ಕ್ ವಿಶ್ವದಲ್ಲೇ ಅತ್ಯಧಿಕ ಸುಂಕ ಎಂದು ಖಂಡಿಸಿದ್ದರು. ಭಾರಿ ಸುಂಕದ ಕಾರಣದಿಂದ ಈ ಮೊದಲು ವಿಶ್ವದಲ್ಲೇ ವಾಹನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿರುವ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರ್ಧಾರವನ್ನು ಕೈಬಿಟ್ಟಿತ್ತು.

   ಕೆನಡಾ, ಚೀನಾ, ಮೆಕ್ಸಿಕೋ ಮತ್ತು ಭಾರತದ ಮೇಲೆ ಏಪ್ರಿಲ್ 2ರಿಂದ ಜಾರಿಯಾಗುವಂತೆ ಸುಂಕ ವಿಧಿಸಿರುವುದನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದು, “ನಮ್ಮ ದೇಶವನ್ನು ಪ್ರತಿಯೊಬ್ಬರೂ ಕಿತ್ತು ತಿಂದಿದ್ದಾರೆ. ನನ್ನ ಮೊದಲ ಅವಧಿಯಲ್ಲಿ ಇದು ನಿಂತಿತ್ತು. ಅವು ನ್ಯಾಯಸಮ್ಮತವಲ್ಲದ ಕಾರಣ ನಾವು ಅದನ್ನು ನಿಜವಾಗಿಯೂ ಸ್ಥಗಿತಗೊಳಿಸಲಿದ್ದೇವೆ. ಆರ್ಥಿಕ ದೃಷ್ಟಿಕೋನದಿಂದ, ಹಣಕಾಸು ಮತ್ತು ವ್ಯಾಪಾರ ದೃಷ್ಟಿಕೋನದಿಂದ ನಮ್ಮ ದೇಶವನ್ನು ಬಹುತೇಕ ವಿಶ್ವದ ಎಲ್ಲ ದೇಶಗಳು ಕಿತ್ತು ತಿನ್ನುತ್ತಿವೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link