ಮೋದಿ ವಿರುದ್ಧ ಟ್ರಂಪ್‌ ಆಪ್ತನಿಂದ ಮತ್ತೆ ವಾಗ್ದಾಳಿ….!

ವಾಷಿಂಗ್ಟನ್‌: 

     ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ   ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಪ್ರಧಾನಿ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ಬಳಿಕ ಅಮೆರಿಕದ ಕಣ್ಣು ಮತ್ತಷಷ್ಟು ಕೆಂಪಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ-ಪರ ಸಹಾಯಕ ಪೀಟರ್ ನವರೊ ಈ ಕುರಿತು ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ಮೋದಿ, ಕ್ಸಿ ಮತ್ತು ಪುಟಿನ್ – ಈ ಮೂವರು ನಾಯಕರ ನಡುವಿನ ಸೌಹಾರ್ದತೆಯ ದೃಶ್ಯಗಳು ಸೋಮವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ, ಪೀಟರ್ ನವರೊ “ಮೋದಿ ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿಗಳೊಂದಿಗೆ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.

   ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ನಾಯಕನಾಗಿ, ವಿಶ್ವದ ಇಬ್ಬರು ದೊಡ್ಡ ಸರ್ವಾಧಿಕಾರಿಗಳಾದ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಮೋದಿ ಈ ರೀತಿ ನಡೆದುಕೊಳ್ಳುವುದು ನಾಚಿಕೆಗೇಡು. ಭಾರತವು ದಶಕಗಳಿಂದ ಚೀನಾದೊಂದಿಗೆ ಶೀತಲ ಸಮರದಲ್ಲಿದೆ. ಈಗ ಮೋದಿ ಅಲ್ಲಿಗೆ ಹೋಗಿ ಕೈಕುಲುಕಿದರೆ ವಿಶೇಷವಾಗಿ ಏನಾಗುತ್ತದೆ ಎಂಬಬುದು ನನಗೆ ತಿಳಿದಿಲ್ಲ. ಭಾರತೀಯ ನಾಯಕರು ರಷ್ಯಾದೊಂದಿಗೆ ಅಲ್ಲ, ನಮ್ಮೊಂದಿಗೆ ಮತ್ತು ಯುರೋಪ್ ಮತ್ತು ಉಕ್ರೇನ್‌ನೊಂದಿಗೆ ಇರಬೇಕೆಂದು ಯಾವಾಗ ಅರಿತುಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿಲ್ಲ. ಆದಷ್ಟು ಬೇಗ ಅವರಿಗೆ ಸತ್ಯ ತಿಳಿದರೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.

   ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ಜಾಗತಿಕ ನಾಯಕರನ್ನು ಭೇಟಿ ಆದರು. ವಿಶೇಷವೇನೆಂದರೆ ಮೋದಿಯನ್ನು ಕಂಡ ಕೂಡಲೇ ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌ ಅವರು ಅಪ್ಪಿಕೊಂಡಿದ್ದಾರೆ. ಶೃಂಗಸಭೆಯ ಹೊರತಾಗಿ ಇಂದು ಇಬ್ಬರು ನಾಯಕರು ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕಳೆದ ಕೆಲ ತಿಂಗಳಿನಿಂದ ಭಾರತ, ಚೀನಾ, ರಷ್ಯಾ ಸೇರಿ ವಿಶ್ವದ ಹಲವು ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಿರುದ್ಧ ತೆರಿಗೆ ಯುದ್ಧ ಆರಂಭಿಸಿದ್ದಾರೆ. 

   ಅದರ ಬೆನ್ನಲ್ಲೇ ನಡೆಯುತ್ತಿರುವ ಶಾಂಘೈ ಶೃಂಗಸಭೆಯನ್ನು ಗ್ಲೋಬಲ್‌ ಸೌತ್‌ ದೇಶಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಬಳಸಿಕೊಂಡಿವೆ. ಅದರ ನಡುವೆಯೇ ತೆರಿಗೆ ದಾಳಿಗೆ ಒಳಗಾದ ಎರಡು ದೇಶಗಳ ನಾಯಕರಾದ ಮೋದಿ ಮತ್ತು ಕ್ಸಿ ಭಾನುವಾರ ಜಾಗತಿಕ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.

Recent Articles

spot_img

Related Stories

Share via
Copy link