ವಿವಿಧ ಯೋಜನೆಗಳಿಗೆ ನಾಳೆ ಪ್ರಧಾನಿಯಿಂದ ಚಾಲನೆ

ನವದೆಹಲಿ

    ನಾಳೆ ಮಂಗಳವಾರ ಧನ್ವಂತರಿ ಜಯಂತಿ ಇದೆ. ಆ ದಿನವನ್ನು ಆಯುರ್ವೇದ ದಿನವಾಗಿಯೂ ಆಚರಿಸಲಾಗುತ್ತದೆ. ನಾಳೆಯದ್ದು 9ನೇ ಆಯುರ್ವೇದ ದಿನವಾಗಿದ್ದು, ಆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳ ಒಟ್ಟು ಮೌಲ್ಯ 12,850 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಅಕ್ಟೋಬರ್ 29ರಂದು ಪಿಎಂ ಚಾಲನೆಗೊಳಿಸುತ್ತಿರುವ ವಿವಿಧ ಯೋಜನೆಗಳು

  • ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಲವು ಹೆಲ್ತ್​ಕೇರ್ ಸಂಸ್ಥೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುತ್ತದೆ.
  • ವಿವಿಧ ರಾಜ್ಯಗಳಲ್ಲಿ ಆಸ್ಪತ್ರೆ, ನರ್ಸಿಂಗ್ ಕಾಲೇಜು ಇತ್ಯಾದಿಗಳ ಉದ್ಘಾಟನೆ ಆಗಲಿದೆ.
  • ಭಾರತದ ಮೊದಲ ಅಖಿಲ ಭಾರತ ಆಯುರ್ವೇದ ಸಂಸ್ಥೆಯ ಎರಡನೇ ಹಂತದ ಯೋಜನೆಗೆ ಪಿಎಂ ಚಾಲನೆ ನೀಡಲಿದ್ದಾರೆ.
  • ದೇಶದ ವಿವಿಧೆಡೆ 11 ತೃತೀಯ ಆರೋಗ್ಯಪಾಲನಾ ಕೇಂದ್ರಗಳಲ್ಲಿ ಡ್ರೋನ್ ಸರ್ವಿಸ್​ಗೆ ಚಾಲನೆ ನೀಡಲಿದ್ದಾರೆ.
  • ಲಸಿಕೆ ಪ್ರಕ್ರಿಯೆ ಡಿಜಿಟಲೀಕರಣಕ್ಕಾಗಿ ಪ್ರಧಾನಿಗಳು ಯು-ವಿನ್ ಪೋರ್ಟಲ್ ಅನ್ನು ಪಿಎಂ ಚಾಲನೆ ನೀಡಲಿದ್ದಾರೆ. ಇದರಿಂದ ಗರ್ಭಿಣಿಯರು ಮತ್ತು ಶಿಶುಗಳಿಗೆ ಅನುಕೂಲವಾಗಲಿದೆ.
  • ಮೆಡಿಕಲ್ ಡಿವೈಸ್ ಮತ್ತು ಬಲ್ಕ್ ಆಗಿ ಔಷಧಗಳನ್ನು ಪಿಎಲ್​ಐ ಸ್ಕೀಮ್ ಅಡಿಯಲ್ಲಿ ತಯಾರಿಸಲು ಐದು ಯೋಜನೆಗಳಿಗೆ ಪಿಎಂ ಚಾಲನೆ ನೀಡಲಿದ್ದಾರೆ.
  • ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಬಲಪಡಿಸಲು ವಿವಿಧ ಕ್ರಮಗಳಿಗೆ ಚಾಲನೆ ಸಿಗಲಿದೆ.

    ಆಯುಷ್ಮಾನ್ ಭಾರತ್ ಹೆಲ್ತ್ ಇನ್​ಫ್ರಾಸ್ಟ್ರಕ್ಚರ್ ಮಿಷನ್ ಅಡಿಯಲ್ಲಿ ದೇಶದ ವಿವಿಧೆಡೆ 21 ಕ್ರಿಟಿಕಲ್ ಕೇರ್ ಬ್ಲಾಕ್​ಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಕರ್ನಾಟಕವೂ ಒಳಗೊಂಡಿದೆ. ಇನ್ನು, ನರಸಾಪುರ ಮತ್ತು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇಎಸ್​ಐ ಆಸ್ಪತ್ರೆ ನಿರ್ಮಾಣಕ್ಕೆ ನಾಳೆ ಅಡಿಗಲ್ಲು ಹಾಕಲಾಗುತ್ತಿದೆ.

   ವೈದ್ಯಕೀಯ ಸಾಧನ ಮತ್ತು ಔಷಧಗಳ ತಯಾರಿಕೆಗೆ ಇರುವ ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಐದು ಯೋಜನೆಗಳು ನಾಳೆ ಆರಂಭವಾಗುತ್ತಿವೆ. ಇದರಲ್ಲಿ ಬೆಂಗಳೂರಿನಲ್ಲಿ ಒಂದು ಸ್ಥಾಪನೆಯಾಗುತ್ತಿದೆ.

    ಪಿಎಂ ಅವರು ನಾಲ್ಕು ಕಡೆ ಆಯುಷ್ ಎಕ್ಸಲೆನ್ಸ್ ಸೆಂಟರ್​ಗಳನ್ನು ಉದ್ಘಾಟಿಸುತ್ತಿದ್ದಾರೆ. ಬೆಂಗಳೂರಿಯ ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್​ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಡಯಾಬಿಟಿಸ್ ಅಂಡ್ ಮೆಟಬಾಲಿಕ್ ಡಿಸಾರ್ಡರ್ಸ್ ಎನ್ನುವ ಕೇಂದ್ರವೂ ಇದರಲ್ಲಿ ಸೇರಿದೆ.

Recent Articles

spot_img

Related Stories

Share via
Copy link