ಲಕ್ನೋ:
ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಮಾಜಿ ಪತ್ನಿ ಹಸೀನ್ ಜಹಾನ್ n) ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮ್ಮ ಮಗಳು ಆಯ್ರಾಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಗೆಳತಿಯ ಮಗಳಿಗೆ ಮತ್ತು ಕುಟುಂಬಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹಸೀನ್ ಜಹಾನ್ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ. ಹಸೀನ್ ಜಹಾನ್ ಮತ್ತು ಅವರ ಮಗಳಿಗೆ ತಿಂಗಳಿಗೆ ₹4 ಲಕ್ಷ ಜೀವನಾಂಶ ನೀಡಬೇಕೆಂದು ಇತ್ತೀಚೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಇದರಲ್ಲಿ ₹2.5 ಲಕ್ಷ ಮಗಳ ಶಿಕ್ಷಣ ಮತ್ತು ಖರ್ಚುಗಳಿಗಾಗಿ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ʼತಮ್ಮ ಮಗಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಸಿಕ್ಕಿದೆ ಎಂದೂ, ಇದನ್ನು ತಡೆಯಲು ಕೆಲವು ಶತ್ರುಗಳು ಪ್ರಯತ್ನಿಸಿದ್ದಾರೆ ಎಂದೂ ಹಸೀನ್ ಜಹಾನ್ ಆರೋಪಿಸಿದ್ದಾರೆ. ತಮ್ಮ ಮಗಳು ಉತ್ತಮ ಶಾಲೆಯಲ್ಲಿ ಓದುವುದು ಶತ್ರುಗಳಿಗೆ ಇಷ್ಟವಿಲ್ಲ. ಆದರೆ ಅಲ್ಲಾಹನ ಅನುಗ್ರಹದಿಂದ ಅವರ ಯೋಜನೆಗಳು ವಿಫಲವಾದವುʼ ಎಂದೂ ಹಸೀನ್ ಜಹಾನ್ ಹೇಳಿದ್ದಾರೆ.
ಗೆಳತಿ ಮತ್ತು ಅವರ ಮಗಳಿಗೆ ದುಂದು ವೆಚ್ಚ ಮಾಡುವ ಶಮಿ ತಮ್ಮ ಮಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ತಮ್ಮ ಮಗಳನ್ನು ತಿರುಗಿಯೂ ನೋಡದ ಶಮಿ, ಗೆಳತಿ ಮತ್ತು ಅವರ ಮಗಳಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಕೊಡಿಸಿ ಔದಾರ್ಯ ತೋರುತ್ತಿದ್ದಾರೆ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿರುವ ಶಮಿ ಹುಡುಗಿಯರ ಚಪಲವಿದೆ ಎಂದು ಹಸೀನ್ ಜಹಾನ್ ಗಂಭೀರ ಆರೋಪ ಮಾಡಿ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಹೇಳಿದ್ದಾರೆ.
2014ರಲ್ಲಿ ಶಮಿ ಮತ್ತು ಹಸೀನ್ ಜಹಾನ್ ಅವರು ಮದುವೆಯಾಗಿದ್ದರು. ಆದರೆ, 2018ರಲ್ಲಿ ಶಮಿ ಅವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಹಸೀನ್ ಅವರು ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿಯಲ್ಲಿ ದೂರು ನೀಡಿದ್ದರು. ಎರಡು ವರ್ಷಗಳ ಹಿಂದೆ ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ₹1.30 ಲಕ್ಷ ಮಧ್ಯಂತರ ಜೀವನಾಂಶವನ್ನು ಹಸಿನ್ ಜಹಾನ್ ಅವರಿಗೆ ನೀಡಬೇಕು ಎಂದು ಶಮಿ ಅವರಿಗೆ ಸೂಚಿಸಿತ್ತು. ಆದರೆ ಇದನ್ನು ಒಪ್ಪದ ಜಹಾನ್ ಅವರು ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಶಮಿ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣ ಇತ್ಯರ್ಧವಾಗುವವರೆಗೆ ಪತ್ನಿಗೆ ₹ 1.50 ಲಕ್ಷ ಮತ್ತು ಮಗಳಿಗೆ ₹ 2.50 ಲಕ್ಷ ಮಾಸಿಕ ಪರಿಹಾರ ನೀಡಬೆಕು.








