ಮೋಹರಂ ಆಚರಣೆ

ಹರಪನಹಳ್ಳಿ

     ತಾಲೂಕಿನ ಚಿಕ್ಕಕಬ್ಬಳ್ಳಿ ಗ್ರಾಮದಲ್ಲಿ ಮೋಹರಂ ಆಚರಣೆಯನ್ನು ಸಡಗರದಿಂದ ಆಚರಿಸಿದರು.ಗ್ರಾಮದಲ್ಲಿ ಮುಸಲ್ಮಾನರು ಇಲ್ಲದಿದ್ದರೂ ಸಹ ಮುಂಬೈನಲ್ಲಿ ವ್ಯಾಪರಸ್ಥರಾಗಿರುವ ಖಾಸೀಂ ಸಾಬ್ ಮತ್ತು ದಾವಣಗೆರೆ ನಗರದ ಹುಸೇನ್‍ಸಾಬ್ ಸಹೋದರರು ಪ್ರತಿ ವರ್ಷವೂ ಮೋಹರಂ ಹಬ್ಬಕ್ಕು ಮೂರು ದಿನ ಮುಂಚಿತವಾಗಿ ಪಕ್ಕೀರಸ್ವಾವಿಯನ್ನು ಪ್ರತಿಷ್ಠಾಪಿಸಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ.

     ಗ್ರಾಮದಲ್ಲಿ ನಾಯಕ ಜನಾಂಗ, ಹರಿಜನ, ಕುರುಬ ಮತ್ತು ಉಪ್ಪಾರ ಜನಾಂಗದ ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. ಆದರೆ ಇಲ್ಲಿ ಮುಸ್ಲೀಂರಿಲ್ಲ. ಪುರಾತನ ಕಾಲದಲ್ಲಿ ಈ ಗ್ರಾಮದಲ್ಲಿ ವಾಸವಿದ್ದ ಒಂದು ಮುಸ್ಲೀಂ ಮನೆಯವರು ವ್ಯಾಪರಕ್ಕಾಗಿ ಊರು ತೊರೆದು ನಗರ ಸೇರಿದರು. ಆದರೆ ಅದೇ ಮನೆಯವರು ಇಂದು ಸಂಪ್ರದಾಯ ಮಾತ್ರ ಕೈಬಿಡದೇ, ಆಚರಣೆ ವೇಳೆ ದೇವರ ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿ, ಹಬ್ಬ ಮುಕ್ತಾಯದ ಬಳಿಕ ವಾಪಸಾಗುತ್ತೇವೆ ಎಂದು ಹುಸೇನ್‍ಸಾಬ್ ತಿಳಿಸಿದರು.

       ಅಲೆದೇವರ ಹಬ್ಬವನ್ನು ತಾಲೂಕಿನಾಧ್ಯಂತ ಆಚರಿಸುತ್ತಾರೆ. ಆದರೆ ಗ್ರಾಮದಲ್ಲಿ ಮುಸ್ಲೀರಿಲ್ಲ, ಆದರೂ ಸಂಭ್ರಮದಿಂದ ಶಕ್ತ್ಯಾನುಸಾರ ಆಚರಿಸುತ್ತೇವೆ. ಪಕ್ಕೀರಸ್ವಾಮಿಗೆ ಇಷ್ಟಾರ್ಥ ಬೇಡಿಕೊಂಡರೆ ಈಡೇರುತ್ತವೆ ಎನ್ನುವ ಪ್ರತೀತಿ ಇದೆ ಎನ್ನುತ್ತಾರೆ ಗ್ರಾಮದ ಮುಖಂಡ ಕಬ್ಬಳ್ಳಿ ಪರಸಪ್ಪ.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap