ಬೆಂಗಳೂರು :
ಟ್ರೆಡಿಷನಲ್ ಲುಕ್ ನೀಡುವ ಎಥ್ನಿಕ್ ಗೌನ್‌ನಲ್ಲಿ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಮೋಕ್ಷಿತಾ ಪೈ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಇವರ ಈ ರಾಯಲ್ ಲುಕ್ ಸಮ್ಮರ್ ಎಥ್ನಿಕ್ ಫ್ಯಾಷನ್‌ನಲ್ಲಿ ಟಾಪ್ ಲಿಸ್ಟ್‌ಗೆ ಸೇರಿದೆ. ನಟಿ ಮೋಕ್ಷಿತಾ ಪೈ ಹೇಳುವಂತೆ, ಈ ಗೌನ್‌ನನ್ನು ತಿಳಿ ವರ್ಣದ ಸೀರೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ನೆಕ್‌ಲೈನನ್ನು ಸಿಂಪಲ್ ಹ್ಯಾಂಡ್‌ವರ್ಕ್‌ನಿಂದ ಡಿಸೈನ್‌ಗೊಳಿಸಲಾಗಿದೆ.
ನೋಡಲು ರಾಯಲ್ ಲುಕ್ ನೀಡುವ ಈ ಗೌನ್ ರಿಚ್ ಆಗಿ ಕಾಣಿಸಬೇಕೆಂದು ಈ ಸೀಸನ್‌ನ ಪಾಸ್ಟೆಲ್ ಶೇಡ್‌ಗೆ ಹಾಗೂ ಗೋಲ್ಡ್ ಶೇಡ್ ಚೂಸ್ ಮಾಡಿದ್ದೇನೆ. ಇನ್ನು, ಈ ಗೌನ್‌ನ ಮತ್ತಷ್ಟು ಅಂದ ಹೆಚ್ಚಿಸಿರುವುದು ವೇಸ್ಟ್ ಬ್ಯಾಂಡ್ ಅಂದರೇ, ಕಮರ್‌ಬಾಂದ್. ಇದನ್ನು ಖುದ್ದು ನಾನೇ ಪ್ಲಾನ್ ಮಾಡಿ, ಕಸ್ಟಮೈಸ್ಡ್ ಮಾಡಿ, ವಿನ್ಯಾಸ ಮಾಡಿಸಿದ್ದೇನೆ. ಇದಕ್ಕೂ ಕೂಡ ಹ್ಯಾಂಡ್ ವರ್ಕ್ ಮಾಡಿಸಲಾಗಿದೆ. ನನ್ನ ಪ್ರಕಾರ, ಪಾಸ್ಟೆಲ್ ಕಲರ್‌ನ ಗೌನ್‌ಗಳು ಈ ಸಮ್ಮರ್ ಸೀಸನ್‌ನಲ್ಲಿ ಧರಿಸಿದಾಗ ರಿಚ್ ಲುಕ್ ನೀಡುತ್ತದೆ. ಹಾಗಾಗಿ ಈ ಶೇಡ್‌ನದ್ದನ್ನು ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

ಸೀಸನ್‌ನಲ್ಲಿ ಆದಷ್ಟೂ ಡಾರ್ಕ್ ಶೇಡ್ ಆಯ್ಕೆ ಮಾಡುವುದಕ್ಕಿಂತ ತಿಳಿ ವರ್ಣವನ್ನು ಚೂಸ್ ಮಾಡುವುದು ಉತ್ತಮ. ಡಿಸೈನ್ ಕೂಡ ಅಷ್ಟೇ! ಸಿಂಪಲ್ ಲುಕ್ ನೀಡುವ ಹ್ಯಾಂಡ್‌ವರ್ಕ್ ಮಾಡಿಸಿದಾಗ ಎಂತಹ ಗೌನ್‌ಗಳು ಕೂಡ ಸಖತ್ತಾಗಿ ಕಾಣಿಸುತ್ತವೆ. ನೋಡಲು ರಾಯಲ್ ಲುಕ್ ನೀಡುತ್ತವೆ ಎನ್ನುತ್ತಾರೆ ಮೋಕ್ಷಿತಾ. ಇನ್ನು, ಇದರೊಂದಿಗೆ ಗೌನ್‌ಗೆ ತಕ್ಕಂತೆ ಆಭರಣಗಳನ್ನು ಧರಿಸಿದಾಗ ಅತ್ಯಾಕರ್ಷಕವಾಗಿ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ! ಎನ್ನುತ್ತಾರೆ.
