“ಏಕ ರಾಷ್ಟ್ರ – ಏಕರೂಪದ ಆಸ್ತಿ ನೋಂದಣಿ ವ್ಯವಸ್ಥೆ’ ಎಂಬ ಪರಿಕಲ್ಪನೆಯಡಿ, ದೇಶಾದ್ಯಂತ ನಡೆಯುವ ಆಸ್ತಿ ನೋಂದಣಿ ಅಥವಾ ಆಸ್ತಿ ವರ್ಗಾವಣೆ ಪ್ರಕ್ರಿಯೆಗಳನ್ನು ದೇಶದ ಯಾವುದೇ ನಗರದಲ್ಲಿ ನಡೆಸಬಹುದಾದ ಹೊಸ ಹಾಗೂ ವಿನೂತನ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇದಕ್ಕಾಗಿ, “ನ್ಯಾಶನಲ್ ಜೆನರಿಕ್ ಡಾಕ್ಯು ಮೆಂಟ್ ರಿಜಿಸ್ಟ್ರೇಶನ್ ಸಿಸ್ಟಂ’ ಎಂಬ ವಿನೂತನ ವ್ಯವಸ್ಥೆಯೊಂದನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದು ಸಾಂವಿಧಾನಿಕವಾಗಿ ಮಾನ್ಯತೆ ಪಡೆದಿರುವ ಭಾರತದ ಎಂಟು ಭಾಷೆಗಳಲ್ಲಿ ಲಭ್ಯವಿರುತ್ತದೆ. ಇದರಡಿಯಲ್ಲಿ, ದೇಶದ ಯಾವುದೇ ನಗರಗಳಲ್ಲಿ ನಡೆಯುವ ಆಸ್ತಿ ನೋಂದಣಿ ಅಥವಾ ವರ್ಗಾವಣೆ ಹಾಗೂ ಮತ್ಯಾವುದೇ ಭೂ ಸಂಬಂಧಿತ ದಾಖಲೆಗಳ ನೀಡುವಿಕೆ ಎಲ್ಲವೂ ಒಂದೇ ಸ್ವರೂಪದಲ್ಲಿರಲಿದೆ.
ಈ ವ್ಯವಸ್ಥೆಯಡಿ ಇನ್ನೆರಡು ವಿಶೇಷ ಗಳಿರಲಿವೆ. ಪ್ರತಿಯೊಂದು ಆಸ್ತಿಗೂ ವಿಶೇಷವಾದ ಗುರುತಿನ ಸಂಖ್ಯೆ ಯನ್ನು ನೀಡಲಾಗುತ್ತದೆ.
ಇದಕ್ಕೆ “ಯೂನಿಕ್ ಲ್ಯಾಂಡ್ ಪಾರ್ಸೆಲ್ ಐಡಿ ಸಂಖ್ಯೆ’ ಎಂದು ಕರೆಯ ಲಾಗುತ್ತದೆ. ಇದರಿಂದಾಗಿ, ಯಾವುದೇ ಊರಿನಲ್ಲಿರುವ ಆಸ್ತಿ ಯನ್ನು ಮಾರಾಟ ಮಾಡುವ ಅಥವಾ ಕೊಂಡುಕೊಳ್ಳುವ ಪ್ರಕ್ರಿಯೆಯನ್ನು ಬೇರೆ ಊರಿನ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲೇ ಮಾಡುವ ಸೌಕರ್ಯ ವನ್ನು ಕಲ್ಪಿಸುವ ಚಿಂತನೆಯಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ