ದೇಶದಲ್ಲಿ ನಿನ್ನೆಗಿಂತಲೂ ಇಂದು ಹೆಚ್ಚು ಕೊರೊನಾ ಪ್ರಕರಣಗಳು ದಾಖಲು; 55 ಮಂದಿ ಸಾವು, ಸಕ್ರಿಯ ಕೇಸ್​​ಗಳು 19,719

ದೇಶದಲ್ಲಿ ಪಾಸಿಟಿವಿಟಿ ರೇಟ್​ ಶೇ.98.74ರಷ್ಟಿದ್ದು, ಕಳೆದ 24ಗಂಟೆಯಲ್ಲಿ 3010 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಅಲ್ಲಿಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,25,47,699 ಕ್ಕೆ ಏರಿದೆ.ಭಾರತದಲ್ಲಿ ಪ್ರತಿದಿನ ದಾಖಲಾಗುವ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.

ಕಳೆದ 24ಗಂಟೆಯಲ್ಲಿ3,275 ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಹಾಗೇ, 55 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ನಿನ್ನೆ 31 ಇದ್ದಿದ್ದು ಇವತ್ತು 55ಕ್ಕೆ ಏರಿಕೆಯಾಗಿದೆ. ಹೀಗೆ ಒಟ್ಟಾರೆ ದಾಖಲಾಗುವ ಕೊರೊನಾ ಕೇಸ್​​ನಲ್ಲಿ ಶೇ.82ರಷ್ಟು ಪ್ರಕರಣಗಳು ದಾಖಲಾಗಿದ್ದು ಐದು ರಾಜ್ಯಗಳಿಂದ.

IPL 2022..ಚೆನ್ನೈ ವಿರುದ್ಧ RCB ತಂಡಕ್ಕೆ ಭರ್ಜರಿ ಗೆಲುವು: ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್

ಹಾಗೇ, ಭಾರತದಲ್ಲಿ ಈಗ ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 4,30,91,393. ದೇಶದಲ್ಲಿ ಕೊವಿಡ್​ 19 ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,23,975. 24 ತಾಸುಗಳಲ್ಲಿ ಅತಿಹೆಚ್ಚು ಕೊರೊನಾ ಸೋಂಕಿನ ಸಂಖ್ಯೆ ದಾಖಲಾಗಿದ್ದು ದೆಹಲಿಯಿಂದ. ಇಲ್ಲಿ 1354 ಕೊರೊನಾ ಪ್ರಕರಣಗಳು ದಾಖಲಾಗಿವೆ. ಹರ್ಯಾಣದಲ್ಲಿ 571, ಕೇರಳದಲ್ಲಿ 386, ಉತ್ತರ ಪ್ರದೇಶದಲ್ಲಿ 198 ಕೇಸ್​​ಗಳು ಮತ್ತು ಮಹಾರಾಷ್ಟ್ರದಲ್ಲಿ 188 ಕೇಸ್​​ಗಳು ದಾಖಲಾಗಿವೆ. ಹಾಗೇ 24ಗಂಟೆಯಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 210 ಹೆಚ್ಚಾಗಿದ್ದು, ಒಟ್ಟು ಸಕ್ರಿಯ ಪ್ರಕಣಗಳು 19,719.

ಇನ್ನು ದೇಶದಲ್ಲಿ ಪಾಸಿಟಿವಿಟಿ ರೇಟ್​ ಶೇ.98.74ರಷ್ಟಿದ್ದು, ಕಳೆದ 24ಗಂಟೆಯಲ್ಲಿ 3010 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಅಲ್ಲಿಗೆ ದೇಶದಲ್ಲಿ ಕೊರೊನಾದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,25,47,699 ಕ್ಕೆ ಏರಿದೆ. ಇದರೊಂದಿಗೆ ಲಸಿಕೆ ಅಭಿಯಾನ ಕೂಡ ವೇಗವಾಗಿ ನಡೆಯುತ್ತಿದೆ. ಕಳೆದ 24ಗಂಟೆಯಲ್ಲಿ 13,98,710 ಡೋಸ್​ ಲಸಿಕೆ ನೀಡಲಾಗಿದೆ ಮತ್ತು 3,27,327 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ.

ಪಿಎಸ್‌ಐ ನೇಮಕಾತಿ ಹಗರಣ: ಪ್ರಿಯಾಂಕ್ ಖರ್ಗೆಗೆ ಸಿಐಡಿಯಿಂದ ಮೂರನೇ ನೋಟಿಸ್ ಜಾರಿ

60 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್​ಪಂಜಾಬ್​ನ ಪಟಿಯಾಲಾದಲ್ಲಿರುವ ರಾಜೀವ್ ಗಾಂಧಿ ನ್ಯಾಶನಲ್​ ಕಾನೂನು ಯೂನಿವರ್ಸಿಟಿಯಲ್ಲಿ  60 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢಪಟ್ಟ ಬೆನ್ನಲ್ಲೇ ಅದನ್ನು ಕಂಟೇನ್ಮೆಂಟ್ ಝೋನ್​ ಎಂದು ಗುರುತಿಸಲಾಗಿದೆ.

ಈ 60 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದರೂ ಎಲ್ಲರಲ್ಲೂ ಲಕ್ಷಣಗಳು ಇಲ್ಲ. ಯಾರಲ್ಲಿ ಕೊರೊನಾ ಲಕ್ಷಣಗಳು ಇವೆಯೋ ಅವರನ್ನು ಐಸೋಲೇಟ್ ಮಾಡಲಾಗಿದೆ. ಇಷ್ಟು ಜನರಲ್ಲಿ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಯೂನಿವರ್ಸಿಟಿಯ ಹಾಸ್ಟೆಲ್​​ಗಳಲ್ಲಿರುವ ವಿದ್ಯಾರ್ಥಿಗಳಿಗೆ ರೂಂ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಮೇ 10ರೊಳಗೆ ಹಾಸ್ಟೆಲ್​ ಖಾಲಿ ಮಾಡಬೇಕು ಎಂದು ಹೇಳಲಾಗಿದೆ.

ಸ್ನೇಹಿತೆಯ ಮದುವೆಗೆ ತೆರಳಿ ವಿವಾದಕ್ಕೀಡಾದ ರಾಹುಲ್​ ಗಾಂಧಿ: ಇವರು ಯಾರು ಗೊತ್ತೇ?

ಶಾಲಾ-ಕಾಲೇಜುಗಳು ಶುರುವಾದ ಬೆನ್ನಲ್ಲೇ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ತಗಲುವ ಪ್ರಮಾಣವೂ ಹೆಚ್ಚಿದೆ. ಇತ್ತೀಚೆಗೆ ಉತ್ತರಾಖಂಡ್​​ನ ವೆಲ್ಹಾಮ್ ಬಾಲಕಿಯರ ಶಾಲೆಯಲ್ಲಿ 16 ವಿದ್ಯಾರ್ಥಿನಿಗಳಲ್ಲಿ ಕೊರೊನಾ ದೃಢಪಟ್ಟಿತ್ತು. ಇನ್ನು ದೆಹಲಿ, ನೊಯ್ಡಾ, ಗಾಝಿಯಾಬಾದ್​​ನ ಕೆಲವು ಶಾಲೆಗಳ ವಿದ್ಯಾರ್ಥಿಗಳಲ್ಲೂ ಸೋಂಕು ದೃಢಪಟ್ಟಿದೆ. ಇದು ಸಹಜವಾಗಿಯೇ ಆತಂಕಕಕ್ಕೆ ಕಾರಣವಾಗಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap