ವಾಷಿಂಗ್ಟನ್
ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಸಲುವಾಗಿ 34 ವರ್ಷ ವಯಸ್ಸಿನ ಗುಜರಾತ್ ಮೂಲದ , ಭದ್ರೇಶ್‌ಕುಮಾರ್ ಚೇತನ್‌ಭಾಯ್ ಪಟೇಲ್ ಎಂಬಾತ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (FBI) ದ ಹತ್ತು ಮೋಸ್ಟ್ ವಾಂಟೆಡ್ ಪರಾರಿಯಾದವರ ಪಟ್ಟಿಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. 2015ರ ಏಪ್ರಿಲ್‌ನಲ್ಲಿ ಮೇರಿಲ್ಯಾಂಡ್‌ನಲ್ಲಿ ಪತ್ನಿಯನ್ನು ಕೊಂದ ಆರೋಪವನ್ನು ಈತ ಎದುರಿಸುತ್ತಿದ್ದಾನೆ.
ಭದ್ರೇಶ್‌ಕುಮಾರ್ ಚೇತನ್‌ಭಾಯ್ ಪಟೇಲ್ ತನ್ನ ಪತ್ನಿಯೊಂದಿಗೆ ಮೇರಿಲ್ಯಾಂಡ್‌ನ ಡೋನಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆತನ ಪತ್ನಿ ಪಾಲಕ್ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಕೊಲೆ ಮಾಡಿದ್ದನ್ನು ಇತರ ಕೆಲಸಗಾರರು ನೋಡಿದ್ದಾರು. ನಂತರ ಆತ ಅಲ್ಲಿಂದ ಪರಾರಿಯಾಗಿ ತಲೆ ಮರಿಸಿಕೊಂಡಿದ್ದಾನೆ. ಕೊಲೆಗೆ ಒಂದು ತಿಂಗಳ ಮೊದಲು ದಂಪತಿಯ ವೀಸಾ ಅವಧಿ ಮುಗಿದಿತ್ತು ಎಂದು ತಿಳಿದು ಬಂದಿತ್ತು.
ಆರೋಪಿ ಪಟೇಲ್ ಯುಎಸ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿರಬಹುದು ಅಥವಾ ಕೆನಡಾಕ್ಕೆ ಪರಾರಿಯಾಗಿರಬಹುದು ಅಥವಾ ಭಾರತಕ್ಕೆ ಮರಳಿರಬಹುದು ಎಂದು ಎಫ್‌ಬಿಐ ಶಂಕಿಸಿದೆ. ಸದ್ಯ ಆತನ ಬಂಧನಕ್ಕೆ ಎಫ್‌ಬಿಐ ಬಲೆ ಬೀಸಿದ್ದು, ಆತನ ಸುಳಿವು ನೀಡಿದವರಿಗೆ 2.16 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಮಾತಾಡಿದ ಎಫ್‌ಬಿಐ ಅಧಿಕಾರಿಯೊಬ್ಬರು ನಮ್ಮ ತನಿಖಾಧಿಕಾರಿಗಳ ತಂಡ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರ ನೆರವಿನೊಂದಿಗೆ ಭದ್ರೇಶ್‌ಕುಮಾರ್ ಪಟೇಲ್‌ನನ್ನು ಸೆರೆ ಹಿಡಿಯುತ್ತೇವೆ. ಆತನನ್ನು ಪತ್ತೆಹಚ್ಚಿ, ಸೆರೆಹಿಡಿಯುವವರೆಗೆ ಮತ್ತು ನ್ಯಾಯಾಂಗಕ್ಕೆ ತರುವವರೆಗೆ ವಿಶ್ರಾಂತಿ ಪಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.
