ʼಅಲ್ಲಾಹು ಅಕ್ಬರ್‌ʼ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ʼಮುಸ್ಕಾನ್‌ʼಗೆ ಮೋಸ್ಟ್‌ ವಾಂಟೆಡ್‌ ಉಗ್ರ ʼಜವಾಹಿರಿʼ ಶಹಬ್ಬಾಸ್‌ಗಿರಿ

 ಹಿಜಾಬ್‌ ಗಲಾಟೆ ವೇಳೆ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಪರ ಅಲ್‌ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್‌ ಮಾಡಿದ್ದು, ಭಾರತದ ಶ್ರೇಷ್ಠ ಮಹಿಳೆ ಎಂದು ಕೊಂಡಾಡಿದ್ದಾನೆ.

ಮುಸ್ಕಾನ್‌ ʼಭಾರತದ ಶ್ರೇಷ್ಠ ಮಹಿಳೆʼ ಎಂದು ಹೆಸರಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಜಗತ್ತಿನ ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಯಲ್ಲಿರುವ ಅಯ್ಯಾನ್‌ ಜವಾಹಿರಿ, ಸಧ್ಯ ಅಲ್‌ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದಾನೆ.

ಬೆಂಗಳೂರಿನಲ್ಲಿ ಯುವಕನ ಕೊಲೆ: ಶಾಹಿದ್ ಹೆಸರಿನ ಮೂವರು ಆರೋಪಿಗಳು ಪೊಲೀಸರ ವಶಕ್ಕೆ!

ರಾಜ್ಯದಲ್ಲಿ ಹಿಜಾಬ್‌ ಸಂಘರ್ಷದ ವೇಳೆ ಜೈ ಶ್ರೀರಾಮ್‌ ಘೋಷಣೆಗಳ ನಡುವೆ ಮಂಡ್ಯದ ಮುಸ್ಕಾನ್‌ ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ್ದಳು. ಸಧ್ಯ ಈ ಮುಸ್ಕಾನ್‌ ಪರ ಅಲ್‌ ಖೈದಾ ನಾಯಕ ಜವಾಹಿರಿ, ಮುಸ್ಕಾನ್‌ ಬಗ್ಗೆ ಕವನ ಬರೆದು ಶಹಬ್ಬಾಸ್‌ಗಿರಿ ಕೊಟ್ಟಿದ್ದಾನೆ. ಭಾರತದ ಶ್ರೇಷ್ಠ ಮಹಿಳೆ ಎಂದು ಕೊಂಡಾಡಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ