ಬೆಂಗಳೂರು:
ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ಸ್ ನಿರ್ಮಿಸುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 56 ನೇ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು ಮೋಷನ್ ಪೋಸ್ಟರ್ ಟ್ರೆಂಡಿಂಗ್ ನಲ್ಲಿದೆ ಎಂದು ತಿಳಿದು ಬಂದಿದೆ.
ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಿರ್ದೇಶಕರು ಟೈಟಲ್ ನ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ . ಮಧ್ಯರಾತ್ರಿಯಲ್ಲಿ ಬಹಿರಂಗವಾದ ಮೋಷನ್ ಪೋಸ್ಟರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ.
ಮೊನ್ನೆಯಷ್ಟೇ ಪೋಸ್ಟರ್ ಮೂಲಕ ಹವಾ ಸೃಷ್ಟಿಸಿದ್ದ ನಿರ್ದೇಶಕರು, ಹೊಸ ಮೋಷನ್ ಪೋಸ್ಟರ್ ಟ್ರೆಂಡ್ ಮುಂದುವರೆಸಿದ್ದಾರೆ. ಕುತೂಹಲ ಕೆರಳಿಸುವ ಚಿತ್ರವು ಕುರಿಗಳ ಹಿಂಡನ್ನು ಮುನ್ನಡೆಸುವ ನಾಯಿಯನ್ನು ಒಳಗೊಂಡಿತ್ತು ಮತ್ತು “ಹಿಂದೆ ಹೋಗುವವರಿಗೆ ದಾರಿ ತೋರಿಸಲು ಮುನ್ನಡೆಸುವವರ ಜವಾಬ್ದಾರಿ” ಎಂದು ಶೀರ್ಷಿಕೆ ನೀಡಲಾಗಿದೆ.
ರಾಕ್‌ಲೈನ್ ವೆಂಕಟೇಶ್ ಅವರ ರಾಕ್‌ಲೈನ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಟೇರ’ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. ಶೀರ್ಷಿಕೆ ಪೋಸ್ಟರ್ ಒಂದು ಬಾರಿ ಗಮನಿಸಿದರೆ, 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್ ಸುಧೀರ್, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಏಕೆಂದರೆ ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ