ಆರ್‌ಬಿಐ : ಎಂಪಿಸಿ ಸಭೆ ಆರಂಭ…!

 

ಎಲ್ಲರ ಚಿತ್ತ ರೆಪೋ ದರದತ್ತ

ಬೆಂಗಳೂರು:

    ಆರ್‌ಬಿಐ ಮಾನಿಟರಿ ಪಾಲಿಸಿ ಕಮೀಟಿ  ಸಭೆಯನ್ನು ಆರಂಭ ಮಾಡಿದ್ದು ಕಳೆದ ಬಾರಿ ಎಲ್ಲ ನಿಗದಿತ ಸಭೆಗಳಲ್ಲೂ ಆರ್‌ಬಿಐ ರೆಪೋ ದರವನ್ನು ಹೆಚ್ಚಿಸಿದೆ. ಪ್ರಮುಖವಾಗಿ ಹೇಳಬೆಕೆಂದರೆ ಮೇ ತಿಂಗಳಿಂದ ಇಲ್ಲಿಯವರೆಗೆ  ನಡೆದ ಎಲ್ಲ ಸಭೆಯಲ್ಲೂ ಆರ್‌ಬಿಐ ರೆಪೋ ದರ ಏರಿಸಿದ್ದು, ಈ ಬಾರಿಯ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

    ಇಂದು ಎಂಪಿಸಿ ಸಭೆ ಆರಂಭವಾಗಿದ್ದು, ಫೆಬ್ರವರಿ 8ರವರೆಗೆ ಸಭೆ ನಡೆಯಲಿದೆ. ಇಷ್ಟುದಿನ ರೆಪೋ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಆರ್‌ಬಿಐ ಕಳೆದ ವರ್ಷ ಮೇ ತಿಂಗಳಿನಿಂದ ರೆಪೋ ದರವನ್ನು ಏರಿಸುತ್ತಿದೆ. ಈಗ ಈ ಸಭೆಯ ಬಳಿಕ ಫೆಬ್ರವರಿ 8ರ ಬುಧವಾರ ಆರ್‌ಬಿಐ 25 ಮೂಲಾಂಕ ರೆಪೋ ದರವನ್ನು ಏರಿಸುವ ಸಾಧ್ಯತೆಯಿದೆ. ಈ ಹಿಂದೆ ಆರ್‌ಬಿಐ 35 ಮೂಲಾಂಕ ರೆಪೋ ದರ ಏರಿಸಿದೆ.

    ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರ್‌ಬಿಐ ಸತತವಾಗಿ 5 ಬಾರಿ ರೆಪೋ ದರವನ್ನು ಪರಿಷ್ಕರಣೆ ಮಾಡಿದ್ದು ಪ್ರಸ್ತುತ ಹಣದುಬ್ಬರವು ಕೊಂಚ ನಿಯಂತ್ರಣಕ್ಕೆ ಬಂದಿದ್ದು,  ಬಿಪಿಎಸ್ ಕಡಿತ ಮಾಡುವ ನಿರೀಕ್ಷೆಯಿದೆ. ಅಂದರೆ ಈ ಹಿಂದಿಗಿಂತ ಕೊಂಚ ಕಡಿಮೆ ದರ ಏರಿಕೆ ಸಾಧ್ಯತೆಯಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap