ಎಂಆರ್​ಐ, ಸಿಟಿ ಸ್ಕ್ಯಾನ್ ಹೊಸ ನಿಯಮ : ಜಿಮ್ಸ್‌ ರೋಗಿಗಳ ಪರದಾಟ

ಗದಗ

     ಬಳ್ಳಾರಿ ಬಾಣಂತಿಯರ ಸರಣಿ ಸಾವುಗಳು ಇಡೀ ರಾಜ್ಯವೇ ಬೆಚ್ಚಿ ಬಿಳಿಸಿದೆ. ಸರ್ಕಾರಿ ಆಸ್ಪತ್ರೆಗಳ ಸಹವಾಸವೇ ಬೇಡ ಅನ್ನೋ ಸ್ಥಿತಿಗೆ ಜನರು ಬಂದಿದ್ದಾರೆ. ಈ ನಡುವೆ ಸರ್ಕಾರ ಬಡ ರೋಗಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಐದಾರು ವರ್ಷಗಳಿಂದ MRI ಮತ್ತು ಸಿಟಿ ಸ್ಕ್ಯಾನ್​ ಸೇವೆ ಸಂಪೂರ್ಣ ಉಚಿತವಾಗಿತ್ತು. ಇನ್ಮುಂದೆ ಆಯುಷ್ಮಾನ್ ಭಾರತ್  ಯೋಜನೆಯ ಅನುಮತಿ ಸಿಕ್ಕರೇ ಮಾತ್ರ ಉಚಿತ ಸ್ಕ್ಯಾನ್. ಇಲ್ಲವಾದರೆ, ಬಡ ಜನರು ಸಾವಿರ ಸಾವಿರ ಹಣ ಸುರಿಯಬೇಕು. ಹೊಸ ನಿಯಮಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಾಣಭಯದಿಂದ ಸಾವಿರ ಹಣ ಖರ್ಚು ಮಾಡಿ ಸ್ಕ್ಯಾನ್ ಮಾಡಿಡುತ್ತಿದ್ದಾರೆ.

    ಇಷ್ಟು ವರ್ಷಗಳಿಂದ ಆಧಾರ್ ಕಾರ್ಡ್, ಬಿಪಿಎಲ್, ಎಪಿಎಲ್, ಅಂತ್ಯೋದಯ ರೇಷನ್ ಕಾರ್ಡ್ ಇದರೇ ಉಚಿತವಾಗಿ ತಕ್ಷಣ ಸ್ಕ್ಯಾನ್ ಮಾಡಲಾಗುತ್ತಿತ್ತು. ಆದರೆ, ಈಗ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಅನುಮತಿ ಕಡ್ಡಾಯ. ಅನುಮತಿ ಕೊಟ್ಟರೇ ಮಾತ್ರ ಸ್ಕ್ಯಾನ್ ಇಲ್ಲವಾದರೆ ಎಂಥ ಬಡವರು ಇದ್ದರೂ ಸಾವಿರಾರು ರೂಪಾಯಿ ಹಣ ಭರಿಸಲೇಬೇಕುಅನ್ನೋ ನಿಯಮ ಜಾರಿ ಮಾಡಲಾಗಿದೆ. ವೈದ್ಯರು MRI ಮತ್ತು ಸಿಟಿ ಸ್ಕ್ಯಾನ್​ ತಪಾಸಣೆ ಸೂಚಿಸಿದರೂ ಸಕಾಲಕ್ಕೆ ಸ್ಕ್ಯಾನಿಂಗ್ ಆಗದೇ ರೋಗಿಗಳ ನರಳಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಇದ್ದ ರೋಗಿಗಳ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ. ABRK ಅನುಮತಿ ವ್ಯವಸ್ಥೆಯೂ ಜಿಮ್ಸ್​ನಲ್ಲಿ ಇಲ್ಲ. ಹೀಗಾಗಿ ಬಡರೋಗಿಗಳು ಜಿಮ್ಸ್ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
   ಎಂಥ ಗಂಭೀರ ಸಮಸ್ಯೆ ಇದ್ದ ರೋಗಿಗಳು ಬಂದರೂ ಮೊದಲು ABRK ಅನುಮತಿ ಕಡ್ಡಾಯ ಮಾಡಲಾಗಿದೆ. ಆನ್​ಲೈನ್​ನಲ್ಲಿ ABRK ಅನುಮತಿಗೆ ಕನಿಷ್ಠ 2 ರಿಂದ 4 ಗಂಟೆ ಕಾಯಲೇಬೇಕು ಅಂತ ಜಿಮ್ಸ್ ಅಧಿಕಾರಿಗಳೇ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಗಂಭೀರ ಹೊಟ್ಟೆ ನೋವು, ಅಪಘಾತವಾದ ರೋಗಿಗಳ ಕಾಲು, ಕೈ, ತಲೆಗೆ ಇಂಜುರಿ ಸಮಸ್ಯೆಯಂಥಾ ರೋಗಿಗಳ ಗತಿ ಏನೂ ಅನ್ನೋ ಪ್ರಶ್ನೆ ಕಾಡುತ್ತಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
   ಇನ್ನೂ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ABRK ಅನುಮತಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಬಡ ರೋಗಿಗಳು ಸಾಲ ಮಾಡಿ ಹಣ ಕೊಟ್ಟು ಖಾಸಗಿಯಲ್ಲಿ ಸ್ಕ್ಯಾನಿಂಗ್ ಮಾಡಿಸುತ್ತಿದ್ದಾರೆ. ಬಿಪಿಎಲ್​, ಅಂತ್ಯೋದಯ ಕಾರ್ಡ್ ಇದ್ದರೂ ಸಾವಿರಾರು ಹಣ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೊದಲಿನ ವ್ಯವಸ್ಥೆಯೇ ಮುಂದುವರಿಸುವಂತೆ ಜನರು ಒತ್ತಾಯಿಸಿದ್ದಾರೆ.ಈ ನಿಯಮ ಜಾರಿಗೆ ಮೊದಲು ಉಚಿತ ಸ್ಕ್ಯಾನಿಂಗ್ ಸೇವೆ ಇದ್ದಾಗ 30 ರಿಂದ 40 ಸ್ಕ್ಯಾನ್ ಆಗುತ್ತಿದ್ದವು. ಸಾಕಷ್ಟು ರೋಗಿಳು ಸಮಸ್ಯೆಯಿಂದ ಬಳಲುತ್ತಿದ್ದರು. ಈಗ ಒಂದು ವಾರದಿಂದ ಕೇವಲ ನಿತ್ಯ ಒಂದು ಎರಡು ಸ್ಕ್ಯಾನ್ ಮಾತ್ರ ಆಗುತ್ತೀವೆ ಎಂದು ತಿಳಿಸಿದರು.
   ಈ ಬಗ್ಗೆ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಮಾತನಾಡಿ, ಸರ್ಕಾರದ ಹೊಸ ನಿಯಮದಂತೆ ಜಾರಿ ಮಾಡಲಾಗಿದೆ. ABRK ಅನುಮತಿ ಪಡೆದು ಸ್ಕ್ಯಾನ್ ಮಾಡಬೇಕು ಅಂತ ನಿಯಮ ಬಂದಿದೆ. ಅನುಮತಿಗಾಗಿ 2 ರಿಂದ 4 ಗಂಟೆ ಬೇಕಾಗುತ್ತೆ ಎಂದು ಹೇಳಿದರು.ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕರು ಬಡ ಜನ್ರು. ಗ್ರಾಮೀಣ ಭಾಗದ ಜನ್ರಿಗೆ ABRK ಅನುಮತಿ ಅಂದ್ರೆ ಗೋತ್ತಿಲ್ಲ. ಸ್ಕ್ಯಾನ್ ವಿಭಾಗದಲ್ಲೇ ಈ ವ್ಯವಸ್ಥೆ ಮಾಡಿದರೆ ಅನಕೂಲ ಆಗಬಹುದು. ಆದರೆ, ಈ ಮೊದಲಿನ ವ್ಯವಸ್ಥೆ ಇದ್ದರೇ, ಮಾತ್ರ ಬಡ ರೋಗಿಗಳಿಗೆ ಅನಕೂಲವಾಗಲಿದೆ ಎಂದು ರೋಗಿಗಳು ಒತ್ತಾಯಿಸುತ್ತಿದ್ದಾರೆ.