ಹೊಸಕೋಟೆಗೆ ಮೆಟ್ರೋ ರೈಲು ವಿಸ್ತರಣೆ : ಎಂಟಿಬಿ ನಾಗರಾಜು

ಬೆಂಗಳೂರು:

    ರಾಜ್ಯ ಸರ್ಕಾರ ಮೆಟ್ರೋ ರೈಲು ಮಾರ್ಗವನ್ನು ಕಾಟಂನಲ್ಲೂರು ಮಾರ್ಗವಾಗಿ ಹೊಸಕೋಟೆಗೆ ವಿಸ್ತರಿಸುವ ಯೋಜನೆ ರೂಪಿಸಿ ಪ್ರಸ್ತಾಪ ಸಿದ್ದಪಡಿಸಿರುವುದಕ್ಕೆ ಸಚಿವ ಎಂಟಿಬಿ ನಾಗರಾಜು ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

   ರಾಜ್ಯ ಸರ್ಕಾರ ನಾಲ್ಕು ಹೊಸ ಮೆಟ್ರೋ ಮಾರ್ಗಗಳ ಯೋಜನೆ ರೂಪಿಸಿದ್ದು, ಅದರಲ್ಲಿ ವೈಟ್‌ಫೀಲ್ಡ್ ತನಕ ನಿರ್ಮಾಣವಾಗಿರುವ ಮೆಟ್ರೋ ರೈಲು ಮಾರ್ಗವನ್ನು ಕಾಟಂನಲ್ಲೂರು ಮಾರ್ಗವಾಗಿ ಹೊಸಕೋಟೆಗೆ ವಿಸ್ತರಿಸುವ ಯೋಜನೆ ಸೇರ್ಪಡೆಮಾಡಿದೆ.

    ಮೈಸೂರು-ಕೆಂಗೇರಿ ವಿಸ್ತರಿತ ಮಾರ್ಗದ ಉದ್ಟಾಟನಾ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಹೊಸಕೋಟೆ ನಗರದವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಿಸುವಂತೆ ಸಚಿವ ಎಂಟಿಬಿ ನಾಗರಾಜ ಮನವಿ ಸಲ್ಲಿಸಿದ್ದರು. ನಂತರ, ಬಿ.ಎಂ.ಆರ್. ಸಿ.ಎಲ್.ನ ವ್ಯವಸ್ಥಾಪಕ ನಿರ್ದೇಶಕ ಅಜುಂ ಪರ್ವೇಜ್ ಅವರೊಂದಿಗೆ ಸಭೆ ನಡೆಸಿ ಹೊಸಕೋಟೆಗೆ ಮೆಟ್ರೋರೈಲು ವಿಸ್ತರಿಸುವ ಸಂಬಂಧ ಕ್ರಿಯಾ ಯೋಜನೆ ಸಿದ್ದಪಡಿಸುವಂತೆ ಸೂಚಿಸಿದ್ದರು.

    ಹೊಸಕೋಟೆ ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ ಸಂದರ್ಭ ಸೇರಿದಂತೆ ಸಚಿವ ಸಂಪುಟದ ಸಭೆಗಳ ಸಂದರ್ಭಗಳಲ್ಲೂ ಹಲವು ಬಾರಿ ಸಚಿವ ಎಂಟಿಬಿ ನಾಗರಾಜು ಮನವಿ ಮಾಡಿದ್ದರು.

    ತಾವು ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ನಡೆಸಿದ ಪ್ರಯತ್ನ, ಹಾಕಿದ ಒತ್ತಡ ಅಂತಿಮವಾಗಿ ಫಲ ನೀಡಿದೆ.ಹೊಸಕೋಟೆ ನಗರಕ್ಕೆ ಮೆಟ್ರೋ ರೈಲು ಮಾರ್ಗ ವಿಸ್ತರಿಸುವ ಯೋಜನೆ ಸಿದ್ಧಗೊಂಡಿದೆ ಎಂದು ಸಚಿವ ಎಂಟಿಬಿ ನಾಗರಾಜು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap