ಶಿರಸಿ :
ರಾಜ್ಯ ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ನಿಲುವು ತಾಳಿದ್ದು ಅದನ್ನು ಖಂಡಿಸಿ 31/ 7/2025ರಂದು ಮುಂಡಗೋಡ ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾ ರೈತ ಮೋರ್ಚ ಅಧ್ಯಕ್ಷ ರಮೇಶ್ ನಾಯ್ಕ್ ಕುಪ್ಪಳ್ಳಿ ಹೇಳಿದರು. ಅವರಿಂದು ಶಿರಸಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಸರಕಾರ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಸಮರ್ಪಕವಾಗಿ ನೀಡುತ್ತಿಲ್ಲ,ರೈತರಿಗೆ ಯೂರಿಯಾ ಗೊಬ್ಬರಗಳನ್ನೂ ಪೂರೈಸುತ್ತಿಲ್ಲ. ರೈತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅವರು ಸರಕಾರದ ವಿರುದ್ಧ ಆಪಾದಿಸಿದರು. ಗುರುಪ್ರಸಾದ ಹೆಗಡೆ,ರವಿಚಂದ್ರ ಶೆಟ್ಟಿ, ಆನಂದ ಸಾಲೆರ್ ಉಪಸ್ಥಿತರಿದ್ದರು.
