ಬೆಂಗಳೂರು :
ಮುಂಗಾರು ಮಳೆ ಅಬ್ಬರ ಒಂದು ಸಣ್ಣ ಗ್ಯಾಪ್ ನಂತರ ಮತ್ತೆ ಮುಂದುವರಿದಿದೆ. ಅದ್ರಲ್ಲೂ ಕರ್ನಾಟಕದ ಮಲೆನಾಡು & ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಮಳೆ ಸಂಪೂರ್ಣ ಕರ್ನಾಟಕ ರಾಜ್ಯಕ್ಕೆ ಆವರಿಸಿಕೊಳ್ಳುತ್ತಿದೆ. ಇದೀಗ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿದ್ದು, ಯಾವ ಯಾವ ಜಿಲ್ಲೆಗಳಿಗೆ ಮಳೆ ಬೀಳಲಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಮುಂದೆ ಓದಿ.
ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದ್ದು, ಕರ್ನಾಟಕದಲ್ಲಿ ಮುಂಗಾರು ಮಳೆ ಅಬ್ಬರಕ್ಕೆ ಎಲ್ಲವೂ ಈಗ ಅಲ್ಲೋಲ & ಕಲ್ಲೋಲ ಎಬ್ಬಿಸುತ್ತಿದೆ. ಅದರಲ್ಲೂ ಕಳೆದ ಕೆಲವು ವಾರಗಳಿಂದ ಹೀಗೆ ನಿರಂತರವಾಗಿ ಮಳೆ ಬೀಳುತ್ತಿರುವುದು ಜನರ ಚಿಂತೆಗೂ ಕಾರಣ ಆಗಿತ್ತು. ಹೀಗಿದ್ದಾಗ ಮಳೆ ಆರ್ಭಟ ಕಡಿಮೆ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಹವಾಮಾನ ಇಲಾಖೆ ಹಲವು ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಮಳೆ ನಿಲ್ಲುವುದಿಲ್ಲ ಎಂದಿದೆ. ಇದೀಗ ಮುಂದಿನ 24 ಗಂಟೆಗಳ ಕಾಲ ಭಾರಿ ಭರ್ಜರಿ ಮಳೆ ಈ ಕೆಳಗೆ ನೀಡಿರುವ ಜಿಲ್ಲೆಗಳಿಗೆ ಬೀಳಲಿದೆ!
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 2 ದಿನ ಭಾರಿ ಮಳೆ ಬೀಳಲಿದೆ ಎಂಬ ಮುನ್ಸೂಚನೆಯ ನೀಡಲಾಗಿದೆ. ಹಾಗೇ ಇದರ ಜೊತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ದಾವಣಗೆರೆ ಸೇರಿ ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಕಲಬುರಗಿ, ಬೀದರ್, ಕೋಲಾರದಲ್ಲೂ ಮಳೆ ಅಬ್ಬರ ಗ್ಯಾರಂಟಿ ಆಗಿದೆ. ಬೆಂಗಳೂರಲ್ಲಿ, 3-4 ದಿನ ಕಾಲ ಮೋಡ ಕವಿದ ವಾತವರಣ ಇರಲಿದ್ದು. ಜುಲೈ 12 ಹಾಗೂ 13 ರಂದು ಬಿರುಗಾಳಿ ಸಹಿತ ಭಾರಿ ಮಳೆ ಬೀಳುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಒಟ್ನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿರುವುದು ಒಂದಷ್ಟು ನೆಮ್ಮದಿ ನೀಡಿದೆ. ಹೀಗೆ ಮಳೆ ಮತ್ತಷ್ಟು ದಿನಗಳ ಕಾಲ ಅಬ್ಬರಿಸಿದರೆ ಕರ್ನಾಟಕದ ಬಹುತೇಕ ಎಲ್ಲಾ ಡ್ಯಾಂಗಳು ಪೂರ್ತಿ ತುಂಬಿ ಹೋಗಲಿವೆ. ಇದರಿಂದ ಕರ್ನಾಟಕದ ರೈತರಿಗೆ ಕೂಡ ಅನುಕೂಲ ಆಗಲಿದೆ. ಹೀಗೆ ಈ ಕಾರಣಕ್ಕೆ ಮಳೆಯ ಅವಾಂತರಗಳಿಂದ ಜನರನ್ನು ರಕ್ಷಣೆ ಮಾಡಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅಗತ್ಯ ಇರುವ ಕಡೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆಯ ಮಾಡಲು ಆದೇಶ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
