ರೋಡ್ ರೇಜ್: ರ್‍ಯಾಶ್ ಡ್ರೈವಿಂಗ್ ಪ್ರಶ್ನಿಸಿದಕ್ಕೆ ವಿದ್ಯಾರ್ಥಿಯನ್ನು ಇರಿದು ಕೊಂದ ಕಾರು ಚಾಲಕ!

ಅಹಮದಾಬಾದ್‌: 

   ದಿನೇ ದಿನೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಹಮದಾಬಾದ್‌ನ ಪ್ರಮುಖ ಬ್ಯುಸಿನೆಸ್ ಸ್ಕೂಲ್‌ನ 23 ವರ್ಷದ ವಿದ್ಯಾರ್ಥಿಯೊಬ್ಬನನ್ನು ಅಪರಿಚಿತ ಕಾರು ಚಾಲಕನೊಬ್ಬ ಇರಿದು ಕೊಲೆ ಮಾಡಿದ್ದಾನೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.

   ಭಾನುವಾರ ರಾತ್ರಿ 11.30ರ ಸುಮಾರಿಗೆ ಇಲ್ಲಿನ ಮುದ್ರಾ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ಸ್(ಎಂಐಸಿಎ)ನ ಇಬ್ಬರು ವಿದ್ಯಾರ್ಥಿಗಳು ಬೇಕರಿ ಅಂಗಡಿಯಲ್ಲಿ ಕೇಕ್ ಖರೀದಿಸಿ ತಮ್ಮ ಸಂಸ್ಥೆಯ ಹಾಸ್ಟೆಲ್‌ಗೆ ಬೈಕ್ ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.ಹಿಂತಿರುಗುವಾಗ, ವಿದ್ಯಾರ್ಥಿಗಳು ಬೋಪಾಲ್ ಪ್ರದೇಶದ ಕ್ರಾಸ್‌ರೋಡ್‌ನಲ್ಲಿ ಅತಿ ವೇಗವಾಗಿ ರ್‍ಯಾಶ್ ಡ್ರೈವಿಂಗ್ ಮಾಡುತ್ತಿದ್ದ ಕಾರು ಚಾಲಕನೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಾರೆ ಎಂದು ಅಹಮದಾಬಾದ್ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ. ಕಾರ್ ಡ್ರೈವರ್ ಸುಮಾರು 200 ಮೀಟರ್ ವಿದ್ಯಾರ್ಥಿಗಳನ್ನು ಹಿಂಬಾಲಿಸಿ, ತನ್ನ ವಾಹನದಿಂದ ಚಾಕು ತೆಗೆದುಕೊಂಡು ಅವರಲ್ಲಿ ಒಬ್ಬ ವಿದ್ಯಾರ್ಥಿಗೆ ಇರಿದಿದ್ದಾನೆ ಎಂದು ಜಾಟ್ ಅವರು ತಿಳಿಸಿದ್ದಾರೆ.

   ಇರಿತದಿಂದ ಗಂಭೀರವಾಗಿ ಗಾಗೊಂಡಿದ್ದ ವಿದ್ಯಾರ್ಥಿ ಪ್ರಿಯಾಂಶು ಜೈನ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

   “ಆರೋಪಿಯನ್ನು ಇನ್ನೂ ಗುರುತಿಸಲಾಗಿಲ್ಲ. ಆದರೆ ನಾವು ಕಾರು ಚಾಲಕನನ್ನು ಹುಡುಕುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap