ಕುಣಿಗಲ್ :
ದುಷ್ಟಕರ್ಮಿಗಳು ಯುವಕನೋರ್ವನ್ನು ಅಪಹರಿಸಿ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆ ಮಾಡಿ ತಾಲೂಕಿನ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಎಸೆದು ಪರಾರಿಯಾಗಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ,
ಬೆಂಗಳೂರು ನೆಲಮಂಗಲ ಇಸ್ಲಾಂಪುರದ ವಾಸಿ ಅಜರ್ ಉದ್ದೀನ್ (30) ಕೋಲೆಯಾದ ಯುವಕ
ನಾಪತ್ತೆ ಪ್ರಕರಣ ದಾಖಲು : ಇಸ್ಲಾಂಪುರ ವಾಸಿ ಅಜರ್ ಉದ್ದೀನ್ ಇತ್ತೀಚಿಗೆ ನಾಪತ್ತೆಯಾಗಿದ್ದಾನೆ ಎಂದು ಅವರ ಕುಟುಂಬಸ್ಥರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು ದೂರು ನೀಡಿದರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ರಂಗಸ್ವಾಮಿ ಬೆಟ್ಟದಲ್ಲಿ ಕೊಲೆ : ನೆಲಮಂಗಲದ. ಇಸ್ಲಾಂಪುರ ಗ್ರಾಮದಿಂದ ಅಜರ್ ಉದ್ದೀನ್ ಅವರನ್ನು ಸುಮಾರು ಎಂಟರಿಂದ ಹತ್ತು ಮಂದಿ ದುಷ್ಟಕರ್ಮಿಗಳು ಕಿಡ್ನಾಪ್ ಮಾಡಿಕೊಂಡು ಬಂದು, ಪ್ರಸಿದ್ದ ರಂಗನಾಥ ಸ್ವಾಮಿ ಅರಣ್ಯ ಪ್ರದೇಶದಲ್ಲಿ ಕಲ್ಲಿನಿಂದ ತಲೆ ಹಾಗೂ ಇತರೆ ಭಾಗವನ್ನು ಜಜ್ಜಿ ಕೊಲೆ ಮಾಡಿ, ಪರಾರಿಯಾಗಿದ್ದಾರೆ, ವಲಯ ಅರಣ್ಯ ಇಲಾಖೆಯ ದಿನ ಗೂಲಿ ನೌಕರ ಕೃಷ್ಣಮೂರ್ತಿ ಕುಣಿಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ








