ಮುಸ್ಲಿಂ ದೇಣಿಗೆ ಷರತ್ತುಗಳಿಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: 

    ವಕ್ಫ್ ತಿದ್ದುಪಡಿ ಕಾಯ್ದೆ 2025 ರಲ್ಲಿನ ನಿಬಂಧನೆಯನ್ನು  ಸುಪ್ರೀಂ ಕೋರ್ಟ್ ಸೋಮವಾರ ತಡೆಹಿಡಿದಿದ್ದು, ಒಬ್ಬ ವ್ಯಕ್ತಿಯು ವಕ್ಫ್ ರಚಿಸಲು ಐದು ವರ್ಷಗಳ ಕಾಲ ಮುಸ್ಲಿಂ ಆಗಿರಬೇಕು ಎಂದು ಆದೇಶಿಸಿದೆ. ರಾಜ್ಯ ಸರ್ಕಾರಗಳು ಒಬ್ಬ ವ್ಯಕ್ತಿಯು ಇಸ್ಲಾಂ ಧರ್ಮದ ಅನುಯಾಯಿಯಾಗಿ ಅರ್ಹತೆ ಪಡೆಯುತ್ತಾನೆಯೇ ಎಂದು ನಿರ್ಧರಿಸಲು ನಿಯಮಗಳನ್ನು ರೂಪಿಸುವವರೆಗೆ ಈ ಷರತ್ತು ಅಮಾನತಿನಲ್ಲಿರಲಿದೆ ಎಂದು ನಿರ್ದೇಶಿಸಿದೆ. ವಿಚಾರಣೆಯ ಸಮಯದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು, ” ಇಡೀ ಕಾಯ್ದೆಯನ್ನು ಪ್ರಶ್ನಿಸಲಾಗಿದೆ ಎಂದು ನಾವು ಗಮನಿಸಿದ್ದೇವೆ ಎಂದರು.

    ವಕ್ಫ್ ಪ್ರಕರಣದಲ್ಲಿ ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಮೇ 22 ರಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ಈ ವಿಷಯಗಳ ಕುರಿತು ಮಧ್ಯಂತರ ಆದೇಶಗಳನ್ನು ಕಾಯ್ದಿರಿಸಿತ್ತು. ಇದೀಗ ವಕ್ಫ್ ಎಂದು ಘೋಷಿಸಲಾದ ಆಸ್ತಿಯು ಸರ್ಕಾರಿ ಆಸ್ತಿಯೇ ಎಂದು ನಿರ್ಧರಿಸಲು ಮತ್ತು ಆದೇಶಗಳನ್ನು ಹೊರಡಿಸಲು ಜಿಲ್ಲಾಧಿಕಾರಿಗೆ ಅಧಿಕಾರ ನೀಡುವ ನಿಬಂಧನೆಯನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.

    ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು, ವಕ್ಫ್ ಮಂಡಳಿಯಲ್ಲಿ ಮೂರಕ್ಕಿಂತ ಹೆಚ್ಚು ಮುಸ್ಲಿಮೇತರ ಸದಸ್ಯರನ್ನು ಸೇರಿಸಬಾರದು ಮತ್ತು ಸದ್ಯಕ್ಕೆ ವಕ್ಫ್ ಮಂಡಳಿಗಳಲ್ಲಿ ಒಟ್ಟು ನಾಲ್ಕು ಮುಸ್ಲಿಮೇತರರನ್ನು ಸೇರಿಸಬಾರದು ಎಂದು ಹೇಳಿದೆ. ಮೇ 22 ರಂದು ಎರಡು ಕಡೆಯ ವಾದಗಳ ನಂತರ ನ್ಯಾಯಪೀಠವು ಕಾಯ್ದೆಯ ಮೇಲಿನ ತನ್ನ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದ ನಂತರ ಇಂದಿನ ವಿಚಾರಣೆ ಬಂದಿದೆ . ಈ ವರ್ಷದ ಆರಂಭದಲ್ಲಿ ಸಂಸತ್ತು ಅಂಗೀಕರಿಸಿದ ತಿದ್ದುಪಡಿಗಳ ಮೂಲಕ ವಕ್ಫ್ ಕಾನೂನಿಗೆ ಮಾಡಿದ ಬದಲಾವಣೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳು ಸಲ್ಲಿಕೆಯಾಗಿವೆ. 

    ಸರ್ವೋಚ್ಚ ನ್ಯಾಯಾಲಯವು ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿದ ಅರ್ಜಿಗಳನ್ನು ಆಲಿಸಿದ ಬಳಿಕ ‘ನ್ಯಾಯಾಲಯಗಳಿಂದ ವಕ್ಫ್ ಎಂದು ಘೋಷಿತ, ಬಳಕೆಯ ಕಾರಣದಿಂದ ವಕ್ಫ್ ಆಗಿರುವ ಅಥವಾ ಕ್ರಯಪತ್ರಗಳ ಮೂಲಕ ವಕ್ಫ್ ಎಂದು ಘೋಷಿಸಲಾಗಿರುವ’ ಆಸ್ತಿಗಳನ್ನು ಡಿ-ನೋಟಿಫೈ ಮಾಡುವ ಅಧಿಕಾರ ಸೇರಿದಂತೆ ಮೂರು ವಿಷಯಗಳ ಮೇಲೆ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

Recent Articles

spot_img

Related Stories

Share via
Copy link