ಬೆಂಗಳೂರು:
ಹಲಾಲ್ ಎಂಬುದು ಮುಸ್ಲಿಂರ ಧಾರ್ಮಿಕ ಕ್ರಿಯೆಯಾಗಿದೆ. ಹಲಾಲ್ ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಇದ್ಯಾ.? ಹಲಾಲ್ ಅನ್ನೋದು ಒಂದು ಆರ್ಥಿಕ ಜಿಹಾದ್ ಆಗಿದೆ. ಹಿಂದೂ ಅಂಗಡಿಗಳಲ್ಲಿ ಮುಸ್ಲೀಮರು ಮಟನ್ ತಗೊಳ್ಳುತ್ತಾರಾ.
ಹಲಾಲ್ ಮಾಂಸ ಬಹಿಷ್ಕರಿಸುವ ಅಧಿಕಾರ ನಮಗಿದೆ ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ( CT Ravi ) ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಲಾಲ್ ಮಾಂಸ ಬಹಿಷ್ಕರಿಸೋ ಅಧಿಕಾರ ನಮಗಿದೆ. ಮುಸ್ಲೀಂ ಅಂಗಡಿಗಳಲ್ಲಿ ಹಲಾಲ್ ಮಾಂಸ ಮಾರೋದೊಂದು ಧಾರ್ಮಿಕ ಕ್ರಿಯೆಯಾಗಿದೆ. ಅದೊಂದು ಆರ್ಥಿಕ ಜಿಹಾದ್ ಆಗಿದೆ. ಹಲಾಲ್ ಎಲ್ಲರೂ ಒಪ್ಪಿಕೊಳ್ಳಬೇಕು ಅಂತ ಇದ್ಯಾ.? ಎಂಬುದಾಗಿ ಹೇಳುವ ಮೂಲಕ, ಹಲಾಲ್ ಮಾಂಸ ಬಹಿಷ್ಕಾರವನ್ನು ಅವರು ಸಮರ್ಥಿಸಿಕೊಂಡರು.
ಹಿಂದೂಗಳು ಯುಗಾದಿಯ ಹಬ್ಬದ ಸಮಯದಲ್ಲಿ ಹಲಾಲ್ ಮಾಂಸ, ಉತ್ಪನ್ನಗಳನ್ನು ಭಹಿಷ್ಕರಿಸಿ – ಹಿಂದೂ ಜನಜಾಗೃತಿ ಸಮಿತಿ
ಅವರು ಮಾಂಸವನ್ನು ಹಲಾಲ್ ರೂಪದಲ್ಲಿ ಅಲ್ಲಾಗೆ ಅರ್ಪಿಸುತ್ತಾರೆ. ಅದು ಅವರ ದೇವರಿಗೆ ಪ್ರಿಯ. ಅದೇ ನಮ್ಮ ದೇವರಿಗೆ ಯಂಜಲು ರೂಪದ ಮಾಂಸವಾಗಿದೆ. ಅದನ್ನು ನಾವು ಖರೀದಿಸಬೇಕಾ. ಅವರು ಹೇಳಿದ್ದನ್ನು ನಾವು ಒಪ್ಪಿಕೊಳ್ಳಬೇಕಾ.? ಎಂಬುದಾಗಿ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ