ಉಡುಪಿ:
ಉಡುಪಿ, ಮಾರ್ಚ್ 25 ಉಡುಪಿ ಜಿಲ್ಲೆಯ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಮುಂದುವರಿದಿದೆ. ರಾಜ್ಯದ ಮೂರನೇ ಅತೀ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಉತ್ಸವದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಲಾಗಿದೆ.
ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಶುಕ್ರವಾರ ಮತ್ತು ಶನಿವಾರ ಜಾತ್ರಾ ಮಹೋತ್ಸವ ನಡೆಯಲಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎ ಗ್ರೇಡ್ ದೇವಾಲಯ ಕೊಲ್ಲೂರು ಮೂಕಾಂಬಿಕಾ ದೇವಾಲಯ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿದ್ದು, ರಾಜ್ಯ- ಹೊರ ರಾಜ್ಯಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ.
ಮಗಳಿಗೆ ಶ್ರೀಮಂತ ವರ ಸಿಗಲಿ, ನನಗೆ ಪಿಎಸ್‌ಐ ನೌಕ್ರಿ ಬರಲಿ: ಸವದತ್ತಿ ಯಲ್ಲಮ್ಮಗೆ ಭಕ್ತರಿಂದ ವಿಚಿತ್ರ ಬೇಡಿಕೆ
ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಕೊಲ್ಲೂರು ಗ್ರಾಮ ಪಂಚಾಯತ್‌ಗೆ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ. ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ ನೀಡಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಮುಸ್ಲಿಂ ವ್ಯಾಪಾರಿಗಳ ಮನವೊಲಿಸಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವದ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ದೇವಿ ಮೂಕಾಂಬಿಕೆಯ ದರ್ಶನ ಮಾಡಿದ್ದಾರೆ. ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ನಿಷೇಧ ಹೇರಲಾಗಿದ್ದು, ಕೊಲ್ಲೂರು ಪಂಚಾಯತ್‌ನಿಂದ ವ್ಯಾಪಾರ ಪರವಾನಗಿ ನೀಡಲಾಗಿಲ್ಲ.
ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್..!ಶಿಕ್ಷಣ ಸಚಿವರು ಹೇಳಿದ್ದೇನು..?
ಕೊಲ್ಲೂರು ದೇವಸ್ಥಾನ ವಠಾರದಲ್ಲಿ ಸದ್ಯ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ದೇವಸ್ಥಾನದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿದ್ದು, ಹಿಂದೂ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಕೇಸರಿ ಬಾವುಟ ಹಾಕಲಾಗಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಜಾತ್ರೆಯನ್ನು ನಿರ್ವಿಘ್ನವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಉತ್ಸವ ಸುಸೂತ್ರವಾಗಿ ಮಾಡುವುದು ನಮ್ಮ ಕರ್ತವ್ಯವಾಗಿದೆ. ಅನ್ಯಕೋಮಿನವರಿಗೆ ಅವಕಾಶ ಕೊಡಬಾರದೆಂದು ಹಿಂದೂ ಸಂಘಟನೆ ಮನವಿ ಮಾಡಿದೆ.
ಬಾಲಕನ ಮೇಲೆ ದೌರ್ಜನ್ಯ ಪ್ರಕರಣ, ಒಬ್ಬ ಆರೋಪಿಯ ಬಂಧನ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.
ಹಿಂದೂ ಸಂಘಟನೆಯ ಮನವಿಯನ್ನು ನಾವು ಬೆಂಬಲಿಸಿದ್ದೇವೆ. ಬಂದ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಯಾವುದೇ ಸಂಘರ್ಷದ ವಾತಾವರಣ ಬೇಡ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಕೊಲ್ಲೂರು ದೇವಸ್ಥಾನದ ವಠಾರದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ವ್ಯವಸ್ಥೆ ಮಾಡಿದ್ದೇವೆ. ಸಾರ್ವಜನಿಕ ರಸ್ತೆಯಲ್ಲಿ ಪರವಾನಗಿ ಕೊಡುವ ಅಧಿಕಾರ ಪಂಚಾಯತಿಗಿದೆ ಎಂದು ಹೇಳಿದ್ದಾರೆ.
ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅನುಮತಿ ನೀಡದಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ್ ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದ್ದರು.
ಈ ಬಗ್ಗೆ ಮಾತನಾಡಿದ ಅವರು, “ಕೊಲ್ಲೂರು ಮೂಕಾಂಬಿಕಾ ಜಾತ್ರೆಯಲ್ಲಿ ವ್ಯಾಪಾರ ನಡೆಸಲು ಪಂಚಾಯತ್ ಅನುಮತಿ ನೀಡಬೇಕು. ಪಂಚಾಯತ್ ಹಿಂದುಯೇತರರಿಗೆ ವ್ಯಾಪಾರಕ್ಕೆ ಅನುಮತಿ ನೀಡಿದರೆ ಸಂಘರ್ಷ ನಡೆಯಬಹುದು. ಈ ಹಿನ್ನಲೆಯಲ್ಲಿ ಕೊಲ್ಲೂರು ಮೂಕಾಂಬಿಕೆಯ ವ್ಯವಸ್ಥಾಪನಾ ಸಮಿತಿಯಿಂದ ಪಂಚಾಯತ್‌ಗೆ ಮನವಿ ನೀಡಲಾಗಿತ್ತು. ವ್ಯವಸ್ಥಾಪನಾ ಸಮಿತಿಯ ಸದಸ್ಯೆಯಾಗಿ ವೈಯುಕ್ತಿಕ ನೆಲೆಯಲ್ಲಿ ಮನವಿ ನೀಡಿದ್ದೆ. ಮುಸ್ಲಿಮರಿಗೂ ಅವಕಾಶ ನೀಡಿದರೆ ಸಂಘರ್ಷವಾಗುವ ಮುನ್ನಚ್ಚೆರಿಕೆಯಿಂದ ಮನವಿ ನೀಡಲಾಗಿದೆ,” ಎಂದು ಹೇಳಿದ್ದಾರೆ.
ಶಾಕಿಂಗ್: ಧೋನಿ ಬಳಿಕ ನಾಯಕತ್ವ ತೊರೆಯಲು ಮುಂದಾದ ಮತ್ತೊಬ್ಬ ಸ್ಟಾರ್ ಆಟಗಾರ
ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರತಿಕ್ರಿಯೆ
ಇನ್ನು ಈ ಎಲ್ಲಾ ಬೆಳವಣಿಗೆ ಬಗ್ಗೆ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮ್ ಪ್ರತಿಕ್ರಿಯೆ ನೀಡಿದ್ದು, “ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆ ಮನವಿ ಮಾಡಿತ್ತು. ಪಂಚಾಯತ್ ಎಲ್ಲರ ಮನವಿ ಸ್ವೀಕರಿಸಿದಂತೆ ಈ ಮನವಿಯನ್ನೂ ಸ್ವೀಕರಿಸಿದ್ದೇವೆ. ನಮಗೆ ಹಿಂದುಯೇತರರಿಗೆ ಅವಕಾಶ ನೀಡಬೇಡಿ ಅನ್ನುವ ಸರ್ಕಾರದ ಯಾವುದೇ ಆದೇಶ ಇಲ್ಲ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮದಲ್ಲಿ ಅವಕಾಶ ಇಲ್ಲ,” ಎಂದರು.
“ಕೆಲವು ಮುಸ್ಲಿಂ ವ್ಯಾಪಾರಿಗಳು ವ್ಯಾಪಾರಕ್ಕೆ ಅನುಮತಿ ಕೇಳಿ ಬಂದಿದ್ದರು. ಶಾಂತಿ ವಾತಾವರಣಕ್ಕೆ ವ್ಯಾಪಾರ ಮಾಡಬೇಡಿ. ಅಶಾಂತಿ ವಾತಾವರಣ ಸೃಷ್ಟಿಸಬೇಡಿ ಅನ್ನುವ ಮನವಿ ಮಾಡಿದ್ದೆವು. ಇದಕ್ಕೆ ವ್ಯಾಪಾರಿಗಳು ಸ್ಪಂದಿಸಿ ವ್ಯಾಪಾರ ನಡೆಸದ ಬಗ್ಗೆ ನಿರ್ಧಾರ ತಿಳಿಸಿ ಹೋಗಿದ್ದಾರೆ. ಸದ್ಯ ಕೊಲ್ಲೂರು ಜಾತ್ರೆಯಲ್ಲಿ ಯಾರೂ ವ್ಯಾಪಾರ ಮಾಡುತ್ತಿಲ್ಲ,” ಅಂತಾ ಸ್ಪಷ್ಟನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
