ಸಿನಿಮಾ ಸ್ಟೈಲ್​ನಲ್ಲಿ ಮೊಬೈಲ್ ಕಳ್ಳರನ್ನ ಚೇಸ್ ಮಾಡಿ ಹಿಡಿದ ಮೈಸೂರು ಕಾನ್ಸ್​ಟೇಬಲ್

ಮೈಸೂರು:

      ಈ ಹಿಂದೆ ಮಂಗಳೂರಿನಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಮಲಗಿದ್ದ ವ್ಯಕ್ತಿಯ ಮೊಬೈಲ್, ಹಣವನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಸೆರೆ ಹಿಡಿದಿದ್ದರು.

         ಕಾನ್ಸ್ಟೇಬಲ್ ಒಬ್ಬರು ಸಿನಿಮೀಯ ಶೈಲಿಯಲ್ಲಿ ಕಳ್ಳರನ್ನ ಹಿಡಿದಿದ್ದಾರೆ.

         ಕಾನ್ಸ್​ಟೇಬಲ್ ಲಿಂಗರಾಜು ಎಂಬುವವರು ಇಬ್ಬರು ಮೊಬೈಲ್  ಕಳ್ಳರನ್ನು ಚೇಸ್ ಮಾಡಿ ಹಿಡಿದ ಬಳಿಕ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಉದ್ಯಾನವನದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಇಬ್ಬರು ಕಳ್ಳರು ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು.

        ಈ ವೇಳೆ ವ್ಯಕ್ತಿ ಕೂಗಿದ್ದಾರೆ. ಕೂಗಾಟ ಕೇಳಿದ ಲಿಂಗರಾಜು, ಇಬ್ಬರು ಕಳ್ಳರನ್ನು ಚೇಸ್ ಮಾಡಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಆರೋಪಿಗಳು ಮೈಸೂರಿನ ಉದ್ಬೂರು ಗ್ರಾಮದವರೆಂದು ತಿಳಿದುಬಂದಿದೆ.

ಈ ಹಿಂದೆ ಮಂಗಳೂರಿನಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಮಲಗಿದ್ದ ವ್ಯಕ್ತಿಯ ಮೊಬೈಲ್, ಹಣವನ್ನು ಕದ್ದೊಯ್ಯುತ್ತಿದ್ದ ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸರು ಸೆರೆ ಹಿಡಿದಿದ್ದರು. ಮೊಬೈಲ್ ಕದ್ದೊಯ್ಯುತ್ತಿದ್ದ ಕಳ್ಳನನ್ನು ಬೆನ್ನಟ್ಟಿದ ಪೊಲೀಸರು ಕಳ್ಳನನ್ನು ನೆಲಕ್ಕೆ ಕೆಡವಿ ಸೆರೆಹಿಡಿದ್ದರು. ನಗರದ ನೆಹರು ಮೈದಾನದ ಬಳಿ ಇಬ್ಬರು ವ್ಯಕ್ತಿಗಳು ಕೂಗುತ್ತಿರುವುದನ್ನು ನೋಡಿ ಪೊಲೀಸ್ ಕಮಿಷನರ್ ಕಚೇರಿಯಲ್ಲಿದ್ದ ಸಿಬ್ಬಂದಿ ಗಮನಿಸಿದ್ದರು.

ನಂತರ ವಿಷಯ ತಿಳಿದು ಕಳ್ಳನನ್ನು ಬೆನ್ನಟ್ಟಿದ್ದರು. ಈ ವೇಳೆ ಒಬ್ಬ ಆರೋಪಿ ಸೆರೆಯಾಗಿದ್ದನು. ಆತನ ಸಹಾಯದಿಂದ ಇನ್ನೊಬ್ಬ ಆರೋಪಿಯನ್ನು ಸೆರೆಹಿಡಿದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರು ಪೊಲೀಸರ ಕರ್ತವ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

      ಮಿತಿ ಮೀರಿದ ಹಸುಗಳ್ಳರ ಹಾವಳಿ ಬೆಂಗಳೂರಿನಲ್ಲಿ ಹಸುಗಳ್ಳರ ಹಾವಳಿ ಮಿತಿ ಮೀರಿದೆ. ನೈಟ್ ಕರ್ಫ್ಯೂ ಮಧ್ಯೆಯೂ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಜನವರಿ 7 ರಂದು ರಾತ್ರಿ ನಾಲ್ಕೈದು ಹಸುಗಳನ್ನ ಕದ್ದೊಯ್ದಿದ್ದಾರೆ. ನಗರದ ಅಮೃತಹಳ್ಳಿ, ಬಾಗಲೂರು, ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಈ ಘಟನೆ ನಡೆದಿದೆ.

ಕದ್ದ ಹಸುಗಳನ್ನ ಕ್ಯಾಂಟರ್ ಲಾರಿಯಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದಾರೆ. ಮಧ್ಯಾರಾತ್ರಿ 2 ಗಂಟೆ ವೇಳೆ ಲಾರಿಯಲ್ಲಿ ಬಂದ ಕಳ್ಳರು ಕೃತ್ಯ ಎಸಗಿದ್ದಾರೆ. ಅಮೃತಹಳ್ಳಿಯ ನಿವಾಸಿ ಮಂಜುನಾಥ್ ಎಂಬುವರ ಶೆಡ್ನಿಂದ ಹಸುಗಳನ್ನ ಕದ್ದೊಯ್ದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

           ಬೈಕ್ ಕಳವು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಘಟನೆ, ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಬಳಿಯ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.

ನಂದೀಶ್ ಅವರಿಗೆ ಸೇರಿದ ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಬೈಕ್ ಕಳ್ಳತನವಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap