
ಮೈಸೂರು: ಗುತ್ತಿಗೆದಾರನನ್ನು ಗ್ಯಾಂಗ್‌ವೊAದು ಕಾರಿನಲ್ಲಿ ಅಪಹರಿಸಿ 16 ಲಕ್ಷ ರೂ. ಹಣ ಹಾಗೂ 30 ಗ್ರಾಂ ಚಿನ್ನ ಪಡೆದು ಬಿಡುಗಡೆ ಮಾಡಿರುವ ಘಟನೆ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಮುದ್ದೇಗೌಡನದೊಡ್ಡಿಯ ರಾಮು ಎಂಬುವರೇ ಅಪಹರಣಕ್ಕೊಳಗಾದ ಗುತ್ತಿಗೆದಾರ. ಜುಲೈ 15ರ ರಾತ್ರಿ ತಮ್ಮ ತೋಟದಿಂದ ಸ್ಕೂಟರ್‌ನಲ್ಲಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ತಿರುವಿನ ರಸ್ತೆಯಲ್ಲಿ ನಿಂತಿದ್ದ ನಾಲ್ವರು ರಾಮುರನ್ನು ತಡೆದು, ಬಾಯಿಗೆ ಬಟ್ಟೆಯಿಂದ ಮುಚ್ಚಿ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು. ಬಳಿಕ ಒಂದು ತೋಟದ ಮನೆಯಲ್ಲಿ ಕೂಡಿ ಹಾಕಿದ್ದರು. ಆ ಸಂದರ್ಭದಲ್ಲಿ ಅಪಹರಣಕಾರರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ನಿನ್ನನ್ನು ಕೊಲೆ ಮಾಡುವುದು ಬೇಡವೆಂದರೆ ತಮಗೆ 40 ಲಕ್ಷ ರೂ. ಕೊಡಬೇಕು ಎಂದು ಆರೋಪಿಗಳು ಡಿಮ್ಯಾಂಡ್ ಮಾಡಿದ್ದಾರೆ. ಅಷ್ಟು ಹಣ ತನ್ನ ಬಳಿ ಇಲ್ಲ ಎಂದು ಹೇಳಿದಾಗ, 16 ಲಕ್ಷ ರೂ. ಕೊಡು ಎಂದು ಹೇಳಿದ್ದಾರೆ. ಅದಕ್ಕೆ ಒಪ್ಪಿದ ಗುತ್ತಿಗೆದಾರ ತನ್ನ ಫೋನ್‌ನಿಂದಲೇ ಅಪಹರಣಕಾರರು ಹೇಳಿದಂತೆ ಪತ್ನಿಗೆ ಫೋನ್ ಮಾಡಿ, ಗುತ್ತಿಗೆದಾರರಿಗೆ ಕೊಡಬೇಕೆಂದು ಹೇಳಿ ಬಾಮೈದನ ಕೈಯಲ್ಲಿ ಹಣ ಕೊಟ್ಟು ಕಳಿಸು ಎಂದು ಹೇಳಿದ್ದಾನೆ. ಅದೇ ರೀತಿ ಹೆಂಡತಿ 16 ಲಕ್ಷ ರೂ. ಹಣವನ್ನು ಕೊಟ್ಟು ಕಳಿಸಿದ್ದು, ಆ ಹಣವನ್ನು ಸುತ್ತೂರಿನ ಬಳಿ ಇರುವ ಬಸ್ ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬನಿಗೆ ಕೊಟ್ಟು ಹೋಗಿದ್ದಾರೆ. ಹಣ ಪಡೆದ ಒಂದು ಗಂಟೆಯ ನಂತರ ತೋಟದ ಬಳಿ ಗುತ್ತಿಗೆದಾರ ರಾಮುವನ್ನು ಬಿಟ್ಟು ಹೋಗಿದ್ದಾರೆ. ಬಳಿಕ ಗುತ್ತಿಗೆದಾರ ಈ ವಿಚಾರವನ್ನು ಪತ್ನಿಗೆ ಹೇಳಿದ್ದು, ನಂತರ ವರುಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ಮುದ್ದೇಗೌಡನದೊಡ್ಡಿಯ ಗುತ್ತಿಗೆದಾರ ರಾಮು ಅವರನ್ನು ಅಪಹರಣ ಮಾಡಿ, ಹಣ ಪಡೆದುಕೊಂಡು ಬಿಟ್ಟುಹೋದ ಸಂಬAಧ ಕಿಡ್ನಾಪ್ ಹಾಗೂ ದರೋಡೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಅಪಹರಣ ಮಾಡಿದ ಕಾರಿನಲ್ಲಿ ನಾಲ್ವರು ಇದ್ದು, ಒಟ್ಟಾರೆ 5-6 ಜನರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರು ಯಾರೂ ಕೂಡ ರಾಮುಗೆ ಪರಿಚಿತರಲ್ಲ. ಆರೋಪಿಗಳ ಪತ್ತೆಗಾಗಿ ಮೂರು ಪೊಲೀಸ್???? ತಂಡಗಳನ್ನು ರಚಿಸಲಾಗಿದೆ. ರಾಮು ಬಳಿ ಹಣ ಇರುವುದು ಗೊತ್ತಿರುವ ವ್ಯಕ್ತಿಗಳೇ ಈ ಕೆಲಸ ಮಾಡಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು.
ಮಲ್ಲಿಕಾರ್ಜುನ ಬಾಲದಂಡಿ, ಎಸ್‌ಪಿ








