ಬೆಂಗಳೂರು:
ಮಾರಣಾಂತಿಕ ಕೊರೋನಾ ಸೋಂಕನ್ನು ಮೆಟ್ಟಿ ನಿಲ್ಲುವಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರನೋರ್ವನಿಗೆ ತಗುಲಿದ ಕೊರೋನಾ ಸೋಂಕು ಬರೋಬ್ಬರಿ 88 ಜನರಿಗೆ ವ್ಯಾಪಿಸಿತ್ತು. ರಾಜ್ಯದಲ್ಲೇ ಬೆಂಗಳೂರು ನಂತರದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಇದರಿಂದ ಮೈಸೂರು ಕೆಂಪು ವಲಯ ಹಾಗೂ ಅತಿ ಸೂಕ್ಷ್ಮ ಜಿಲ್ಲೆಯಾಗಿ ಗುರುತಿಸಿಕೊಂಡಿತ್ತು.