ಜಗತ್ತನ್ನು ಬೆಳಗಲು ಒಬ್ಬ ಸೂರ್ಯ ಬೇಕು, ಬದುಕನ್ನು ಬೆಳಗಲು ಒಂದು ಪುಸ್ತಕ ಇದ್ದರೆ ಸಾಕು: ಎನ್ ರಘುಮೂರ್ತಿ

ನಾಯಕನಹಟ್ಟಿ :

     ಜಗತ್ತನ್ನು ಬೆಳಗಲು ಒಬ್ಬ ಸೂರ್ಯ ಬೇಕು, ಬದುಕನ್ನು ಬೆಳಗಲು ಒಂದು ಪುಸ್ತಕ ಇದ್ದರೆ ಸಾಕು ಎಂದು ನಿವೃತ್ತ ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದರು.

       ಪಟ್ಟಣದ ಶಾಖ ಗ್ರಂಥಾಲಯಕ್ಕೆ ಆಗಮಿಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಾ.ಬಿ.ಆರ್.ಅಂಬೇಡ್ಕರ್‌ರವರು ಪುಸ್ತಕ ಪ್ರೇಮಿಯಾಗಿದ್ದರು ೧೮ ಗಂಟೆಗಳ ಕಾಲ ಪುಸ್ತಕವನ್ನು ಅದ್ಯಾಯನ ಮಾಡುತ್ತಿದ್ದರು. ಅತೀ ಹೆಚ್ಚು ಗ್ರಂಥಾಲಯದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು ಎಂದು ತಿಳಿಸಿದರು.

     ಓದಿನಲ್ಲಿ ಸಿಗುವ ಆನಂದ, ಅನುಭವ, ಒಳ್ಳೆ ವಿಚಾರ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಗ್ರಂಥಾಲಯದ ಮಹತ್ವವನ್ನು ಅರುವು ಮೂಡಿಸಬೇಕು. ಪುಸ್ತಕಗಳನ್ನು ತನ್ನದೆಯಾದ ಸ್ಥಾನಮಾನ ಹೊಂದಿದೆ. ಆಗಾಗಿ ಪ್ರತಿಯೊಬ್ಬರು ಓದುವ ಅವ್ಯಾಸ ಬೆಳಸಿಕೊಳ್ಳಬೇಕು. ಪುಸ್ತಕಗಳನ್ನು ಓದಿನಿಂದ ಮನುಷ್ಯನ ಜೀವನ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಗ್ರಂಥಾಲಯದ ಶಿಕ್ಷಣ ವ್ಯವಸ್ಥೆಯ ಹೃದಯ ಆತ್ಮವಾಗಿದೆ. ಗಂಥಾಲಯವು ಜ್ಞಾನವನ್ನು ಹರಡುತ್ತವೆ ಮತ್ತು ಅನೇಕ ಉಪಯೋಗಗಳು ಹೊಂದಿವೆ. ಜ್ಞಾನದ ಉದ್ದೇಶಗಳನ್ನು ಕಲಿಯಲು ಮತ್ತು ಪಡೆಯಲು ಗ್ರಂಥಾಲಯ ಅತ್ಯಗತ್ಯ, ಜವಬ್ದಾರಿಗಳ ಪ್ರಜ್ಞೆಯನ್ನು ಕಲಿಯಲು ಗ್ರಂಥಾಲಯ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. 

    ಯುವಕರು, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಬಂದು ಪುಸ್ತಕವನ್ನು ಓದಿರಿ, ಓದುವ ಹವ್ಯಾಸವನ್ನು ಬೆಳಸಿಕೊಳ್ಳಬೇಕು. ಉತ್ತಮ ನಾಗರೀಕನಾಗಿ ನಿರ್ಮಿಸಲು ಪುಸ್ತಕಗಳನ್ನು ಸಹಾಯ ಮಾಡುತ್ತವೆ ಎಂದು ಅವರು ಮಾತನಾಡಿದರು.

     ಈ ಸಂದರ್ಭದಲ್ಲಿ ಉಪಸ್ಥಿತರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ, ಬಂಗಾರ ನಾಯಕ, ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಮುತ್ತಯ್ಯ, ನಗರ ಘಟಕದ ಅಧ್ಯಕ್ಷ ಓ.ತಿಪ್ಪೇಶ, ಹಾಗೂ ಇನ್ನೂ ಇತರರು ಇದ್ದರು.