ಬೆಂಗಳೂರು:
ಇಂದಿನಿಂದ ‘ನಮ್ಮ ಮೆಟ್ರೋ ರೈಲುಗಳ ಸಂಚಾರದ ಸಮಯದಲ್ಲಿ ಬದಲಾವಣೆಯಾಗಲಿದ್ದು, ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸಂಚರಿಸಲಿವೆ.
ಕಳೆದ 4 ದಿನಗಳಿಂದ ಕೇವಲ 6 ತಾಸುಗಳಿಗೆ ಮೆಟ್ರೋ ರೈಲು ಸೇವೆ ಸೀಮಿತವಾಗಿತ್ತು. ಆದರೆ, ಇಂದಿನಿಂದ ಮುಂಜಾನೆ 7ರಿಂದ ನಗರದ ನಾಲ್ಕೂ ತುದಿಗಳಿಂದ ಮೆಟ್ರೋ ರೈಲುಗಳು ಹೊರಡಲಿವೆ.
ದಟ್ಟಣೆಯ ಅವಧಿಯಲ್ಲಿ ಪ್ರತಿ 4 ನಿಮಿಷಕ್ಕೊಂದು ಹಾಗೂ ಉಳಿದ ಅವಧಿಯಲ್ಲಿ 10 ನಿಮಿಷಗಳಿಂದ 15 ನಿಮಿಷಗಳ ಅಂತರದಲ್ಲಿ ಸೇವೆ ಇರಲಿದೆ. ಇದರಿಂದ ಪ್ರಯಾಣಿಕರ ಸಂಖ್ಯೆ ಸ್ವಲ್ಪ ಹೆಚ್ಚಳ ಆಗಬಹುದು ಎಂದು ಬಿಎಂಆರ್‌ಸಿಎಲ್ ನಿರೀಕ್ಷಿಸಿದೆ.
ಪ್ರಸ್ತುತ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರು ಮಾತ್ರ ಸಂಚಾರ ನಡೆಸಬಹುದಾಗಿದೆ. ಟೋಕನ್ ಕೊಡುವ ವ್ಯವಸ್ಥೆ ಇಲ್ಲವಾಗಿದೆ. ಪ್ರತಿ ರೈಲಿನಲ್ಲಿ 400 ಜನರು ಮಾತ್ರ ಸಂಚರಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ