ಬೆಂಗಳೂರು :
ನಟಿ ನಮ್ರತಾ ಗೌಡ ಧರಿಸಿರುವ ಡೆನಿಮ್ ಶಾರ್ಟ್ಸ್ ಹಾಗೂ ಡೆನಿಮ್ ಟೋಪಿ ಸದ್ಯ ಸೋಷಿಯಲ್ ಮೀಡಿಯಾ ಫ್ಯಾಷನ್ ಫಾಲೋವರ್ಸ್‌ಗಳ ಹುಬ್ಬೇರಿಸಿದೆ. ರಾಶಿ ರಾಶಿ ಕಾಮೆಂಟ್‌ಗಳಿಗೆ ಆಗರವಾಗಿದೆ. ಅರೆ… ಇದಕ್ಕೇನು ಕಾರಣ ಎಂದುಕೊಳ್ಳುತ್ತಿದ್ದೀರಾ! ಇದಕ್ಕೆ ಕಾರಣ ಇಷ್ಟೇ! ಅವರು ಧರಿಸಿರುವ ಟೋಪಿ, ಸಾಕಷ್ಟು ಮಂದಿಗೆ ಡೆನಿಮ್ ಪ್ಯಾಂಟ್‌ನಿಂದ ಕತ್ತರಿಸಿ ಹೊಲೆದಿರುವಂತೆ ಕಾಣಿಸುತ್ತಿದ್ದೆಯಂತೆ! ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ನೆಟ್ಟಿಗರು ಕೂಡ, ಡೆನಿಮ್ ಪ್ಯಾಂಟ್-ಶಾರ್ಟ್ಸ್‌ನಿಂದ ಟೋಪಿ ಮಾಡಿ ಧರಿಸಿದ್ದೀರಾ! ಎಂಬೆಲ್ಲಾ ಕಾಲೆಳೆಯುವ ಕಾಮೆಂಟ್ ಹಾಕಿದ್ದಾರೆ. ಹಾಗೆಂದಿದೆ ಸೋಷಿಯಲ್ ಮೀಡಿಯಾ ಫ್ಯಾಷನ್ ಮೂಲಗಳು.
ಫ್ಯಾಷನ್ ವಿಮರ್ಶಕಿ ವಿದ್ಯಾ ವಿವೇಕ್ ಪ್ರಕಾರ, ನಟಿ ನಮ್ರತಾ ಗೌಡ ಧರಿಸಿರುವುದು ಹಿಪ್ ಹಾಪ್ ಶೈಲಿಗೆ ಸಾಥ್ ನೀಡುವ ಡೆನಿಮ್‌ನ ಬೆರೆಟ್ ಕ್ಯಾಪ್. ಕೆಲವು ಪಾಕೆಟ್‌ನಂತಹ ಪ್ಯಾಚ್ ವರ್ಕ್ ಕೂಡ ಹೊಂದಿರುತ್ತವೆ. ಇವನ್ನು ವುಮೆನ್ ಪೇಂಟರ್ಸ್ ಹ್ಯಾಟ್ ಎಂದೂ ಕೂಡ ಕರೆಯಲಾಗುತ್ತದೆ. ಇದು ಬಿಂದಾಸ್ ಲುಕ್‌ಗೆ ಸಾಥ್ ನೀಡುತ್ತವೆ. ಔಟಿಂಗ್ ಹಾಗೂ ಟ್ರಾವೆಲ್ ಫ್ಯಾಷನ್‌ಗೆ ಸಖತ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಪ್ಯಾಂಟ್‌ನಿಂದ ಟೋಪಿ ಹೊಲೆಸಿ ಹಾಕಿಕೊಳ್ಳುವಷ್ಟು ನಮ್ರತಾಗೆ ಪುರುಸೋತ್ತು ಕೂಡ ಇಲ್ಲ, ಎನ್ನಬಹುದು! ಒಟ್ಟಿನಲ್ಲಿ, ಅವರು ಧರಿಸಿದ ಕ್ಯಾಪ್, ಸದ್ಯ ಸ್ಟ್ರೀಟ್ ಸ್ಟೈಲ್‌ನಲ್ಲಿ ಮತ್ತೊಮ್ಮೆ ಮರಳುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
- ಇಂತಹ ಕ್ಯಾಪ್‌ಗಳು ಎಲ್ಲಾ ಆನ್‌ಲೈನ್ ಶಾಪಿಂಗ್ ಮಾರ್ಟ್‌ನಲ್ಲೂ ಲಭ್ಯ.
- ಟ್ರಾವೆಲ್ ಫ್ಯಾಷನ್‌ಗೆ ಬಿಂದಾಸ್ ಲುಕ್ ನೀಡುತ್ತವೆ.
- ಸುಮಾರು 500 ರೂ.ಗಳಿಂದ ಆರಂಭವಾಗುವ ಇವುಗಳ ಬೆಲೆ ಆಯಾ ಬ್ರಾಂಡ್‌ಗೆ ತಕ್ಕಂತೆ ನಿಗಧಿಯಾಗಿರುತ್ತದೆ.
