ಶೃಂಗೇರಿ:
ಆತ್ಮಹತ್ಯೆಗೆ ಯತ್ನಿಸಿದ್ದ ಕಿರುತೆರೆ ಕಲಾವಿದ ನಂದನ್ ಭಟ್ ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದ್ದಾರೆ. ಶೃಂಗೇರಿ ತಾಲೂಕಿನ ಮೆಣಸೆ ಪಂಚಾಯಿತಿ ಮುಂಡಗೋಡು ಗ್ರಾಮದವರಾದ ನಂದನ್ ಭಟ್ ನಾಟಕ, ಕಿರುತೆರೆಗಳಲ್ಲಿ ಅಭಿನಯ ಮಾಡುತ್ತಿದ್ದರು.
ಬೆಂಗಳೂರಿನ ಮಾಸ್ಟರ್ ಆನಂದ್ ನಿರ್ದೇಶನದ ಅಮ್ಮ ಬಂದ್ರು ಸೇರಿ ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದರು. ಕಳೆದ ವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವಿವಾಹಿತರಾಗಿದ್ದ ಇವರು, ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸುರೇಶ್ ಪುತ್ರ.
ಮಾಸ್ಟರ್ ಆನಂದ್ ಸ್ಟುಡಿಯೋಸ್‌ನಲ್ಲಿ ರಿಲೀಸ್ ಆಗುತ್ತಿದ್ದ ಅಮ್ಮ ಬಂದ್ರು ವೆಬ್ ಸಿರೀಸ್‌ನಲ್ಲಿ ನಂದನ್ ಭಟ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಹಲವಾರು ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಂಡಿದ್ದರು. ಜುಲೈ 5ರ ಎಪಿಸೋಡ್‌ನಲ್ಲಿ ನಂದನ್ ಭಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿರೀಸ್‌ನಲ್ಲಿ ಮಾಸ್ಟರ್ ಆನಂದ್ ಹಾಗೂ ಅವರ ಪುತ್ರಿ ವಂಶಿಕಾ ಜತೆ ನಂದನ್ ಭಟ್ ನಟಿಸಿದ್ದರು. ಆದರೆ, ಇವರ ಆತ್ಮಹತ್ಯೆಗೆ ಕಾರಣವೇನು ಅನ್ನೋದು ತಿಳಿದುಬಂದಿಲ್ಲ.
