ವಿರಾಟ್ ಕೊಹ್ಲಿ : 
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಸತತ 15 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. ಐಪಿಎಲ್‌ನ ಮೊದಲ ಸೀಸನ್‌ನಿಂದ ಆರ್‌ಸಿಬಿ ಪರ ಆಡುತ್ತಿರುವ ಆಟಗಾರ ಅಂದರೆ ಅದು ವಿರಾಟ್ ಕೊಹ್ಲಿ. ಹೀಗಿರುವಾಗ ಯಾಕೆ ನೀವು ಇನ್ನೂ ಒಂದೇ ತಂಡದಲ್ಲಿ ಇದ್ದೀರಿ.ಆರ್‌ಸಿಬಿ ಬಿಡಬೇಕು ಎಂದು ನಿಮಗೆ ಅನಿಸಲಿಲ್ಲವಾ ಎಂದು ಪ್ರಶ್ನೆಯನ್ನ ಕೇಳಲಾಯಿತು.
IPL 2022..ಚೆನ್ನೈ ವಿರುದ್ಧ RCB ತಂಡಕ್ಕೆ ಭರ್ಜರಿ ಗೆಲುವು: ನಾಲ್ಕನೇ ಸ್ಥಾನಕ್ಕೆ ಲಗ್ಗೆ ಇಟ್ಟ ರಾಯಲ್ ಚಾಲೆಂಜರ್ಸ್
ಕೊಹ್ಲಿ 2008 ರಿಂದ ಆರ್‌ಸಿಬಿ ತಂಡದಲ್ಲಿದ್ದಾರೆ. 2011ರಿಂದ ತಂಡದ ನಾಯಕರಾಗಿ ಮುನ್ನೆಡಿಸಿದ್ದವರು ವಿರಾಟ್. ಅದಾದ ನಂತರ ಸತತ 10 ವರ್ಷಗಳ ಕಾಲ ಆರ್‌ಸಿಬಿ ತಂಡವನ್ನ ಮುನ್ನೆಡಿಸಿದ ಕೀರ್ತಿ ಅವರಿಗೆ ಇದೆ. ಇದಕ್ಕೆ ಉತ್ತರಿಸಿದ ಅವರು ಒಂದು ಕ್ರೀಡೆ ಸೂಪರ್ ಸ್ಟಾರ್ ಸ್ಥಾನಮಾನವನ್ನ ತಂದು ಕೊಡುವ ಕ್ರೀಡೆ ಅಂದರೆ ಅದು ಕೇವಲ ಯಶಸ್ಸು ಗಳಿಸೋದಲ್ಲ ಎಂದಿದ್ದಾರೆ.
ಈ ಬಗ್ಗೆ ಸಾಕಷ್ಟು ಬಾರಿ ಯೋಚಿಸಿದ್ದೇನೆ. ನನಗೆ ಹರಾಜಿನಲ್ಲಿ ಬರಲು ಆಫರ್ ಇತ್ತು. ಎಲ್ಲರಿಗೂ ಒಂದಿಷ್ಟು ಸಮಯ ಇದೆ ಅಂದ್ಕೊಂಡೆ. ಅವರು ಬರುತ್ತಾರೆ, ಆಡುತ್ತಾರೆ, ಬದುಕುತ್ತಾರೆ ಮತ್ತು ಹೋಗುತ್ತಾರೆ. ಮತ್ತು ಜೀವನವು ಹೇಗೆ ಮುಂದುವರಿಯುತ್ತದೆ. ಅವರಲ್ಲಿ ಇಂತಹ ಅನೇಕ ಆಟಗಾರರು ನಮ್ಮಲ್ಲಿ ಇದ್ದಾರೆ. ಅವರು ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ.
ಪಿಎಸ್‌ಐ ನೇಮಕಾತಿ ಅಕ್ರಮ: ತರಬೇತಿ ಪಡೆಯುತ್ತಿದ್ದ ಪಿಎಸ್‌ಐ ಸಿಐಡಿ ವಶಕ್ಕೆ
ಆದರೆ ಅವರನ್ನು ಓಹ್..! ಅವನು IPL ಚಾಂಪಿಯನ್, ಈತ ವಿಶ್ವ ಕಪ್ ಚಾಂಪಿಯನ್ ಎಂದು ಯಾರೂ ಕರೆಯುವುದಿಲ್ಲ. ನೀವು ಒಳ್ಳೆಯ ವ್ಯಕ್ತಿಯಾಗಿದ್ದಾಗ ಮಾತ್ರ ಜನರು ನಿಮ್ಮನ್ನು ಪ್ರೀತಿಸುತ್ತಾರೆ. ನೀವು ಒಳ್ಳೆಯವರಲ್ಲದಿದ್ದರೆ ಜನ ನಿಮ್ಮಿಂದ ದೂರ ಹೋಗುತ್ತಾರೆ. ಇದು ಜೀವನ.ನನ್ನ ವೃತ್ತಿಜೀವನದ ಆರಂಭದಲ್ಲಿ ಜಗತ್ತಿನ ಪ್ರಮುಖ ಆಟಗಾರರೊಂದಿಗೆ ಆಡುವ ಅವಕಾಶವನ್ನ ಪಡೆದೆ. ಇದು ನನ್ನನ್ನ ಬೇರೊಂದು ಸ್ಥಾನಕ್ಕೆ ಕೊಂಡೊಯ್ಯಲು ಸಹಾಯ ಮಾಡಿತು. ಮಾತ್ರವಲ್ಲ ನನ್ನ ಆಟ ಗಂಭೀರವಾಗಿರಲು ಸಾಧ್ಯವಾಯಿತು ಎಂದು ಐಪಿಎಲ್ನಿಂದ ಆದ ಸಹಾಯದ ಬಗ್ಗೆ ವಿರಾಟ್ ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
