ನಾಗತಿಹಳ್ಳಿಯವರ “ನನ್ನ ಪ್ರೀತಿಯ ಹುಡುಗಿಗೆ” 24 ವರ್ಷ….!

ಬೆಂಗಳೂರು:

    ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ನನ್ನ ಪ್ರೀತಿಯ ಹುಡುಗಿ ಚಿತ್ರಕ್ಕೆ 24 ರ ಸಂಭ್ರಮ.ಈ ಕುರಿತಂತೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ೨೪ ವರ್ಷಗಳ ಹಿಂದೆ ದೈತ್ಯ ಕಪಾಲಿಯಲ್ಲಿ ೪೦ ವಾರ ಪ್ರದರ್ಶನಗೊಂಡ ಅದ್ದೂರಿ ಚಿತ್ರ. ಈಗ ಕಪಾಲಿಯ ಜತೆಗೆ ಅವನ ಸರೀಕ ಗೆಳೆಯ ಗೆಳತಿಯರೆಲ್ಲ ನೆಲಸಮಗೊಂಡಿದ್ದಾರೆ. ಉಳಿದಿರುವುದು ಮಧುರ ನೆನಪು ಮಾತ್ರ. ಅಮೆರಿಕಾದ ಫ್ರೀವೇಗಳಲ್ಲಿ ಒಮ್ಮೆ ಗುನುಗಿಕೊಂಡದ್ದು ಜನಪ್ರಿಯ ಹಾಡಾಗಿ ರೂಪುತಳೆಯಿತು. ‘ಕಾರ್ ಕಾರ್ ಎಲ್ ನೋಡಿ ಕಾರ್..!’ ಎಂದಿದ್ದಾರೆ.

   ನಾಗತಿಹಳ್ಳಿ ಚಂದ್ರಶೇಖರ್ ಅವರ ಹಿಂದಿನ ಚಿತ್ರ ‘ಅಮೇರಿಕಾ ಅಮೇರಿಕಾ ‘ (1995) ಅದ್ಭುತ ಯಶಸ್ಸಿನ ನಂತರ , ಇದನ್ನು ಸಂಪೂರ್ಣವಾಗಿ ಅಮೆರಿಕದಲ್ಲಿ ಚಿತ್ರೀಕರಿಸಲಾಯಿತು . ನಂತರ ಅವರು ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ನಡೆಯುವ ಮತ್ತೊಂದು ಕ್ಯಾಂಪಸ್ ಪ್ರಣಯ ಕಥೆಯನ್ನು ಹೊರತಂದರು.

Recent Articles

spot_img

Related Stories

Share via
Copy link