ಮಂಪರು ಪರೀಕ್ಷೆ ಗೆ ಒಳಪಡಿಸಿದರೆ ತಪ್ಪೇನಿದೆ: ಪ್ರಕಾಶ್ ರಾಜ್

ಶಿವಮೊಗ್ಗ :

ಉಜಿರೆಯಲ್ಲಿ ಸೌಜನ್ಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಇಂದು ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ಧರ್ಮದ ಸೋಗಿನವರು ತಪ್ಪು ಮಾಡಿದರೆ ಅದನ್ನು ತನಿಖೆ ಮಾಡುವುದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.

ಗುಪ್ತಚರ ಇಲಾಖೆಗೆ ಅನುಮಾನಗಳಿದ್ದರೆ ಧರ್ಮಾಧಿಕಾರಿಗಳನ್ನೂ ಮಂಪರು ಪರೀಕ್ಷೆಗೆ ಒಳಪಡಿಸುವುದರಲ್ಲಿ ತಪ್ಪೇನಿದೆ. ಪೊಲೀಸರು ಇದನ್ನು ನೋಡಿಕೊಳ್ಳುತ್ತಾರೆ. ಸತ್ಯ ಹೊರಗೆ ಬಂದೇ ಬರುತ್ತದೆ ಎಂದು ತಿಳಿಸಿದ್ದಾರೆ.

ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹ ಕೇಳಿ ಬರುತ್ತಿದೆ. ಇದು ತನಿಖೆಯ ಭಾಗವಾಗಿದ್ದರೆ, ನಿಜಾಂಶ ತಿಳಿಯುವ ಅವಶ್ಯಕತೆ ಇದ್ದರೆ ಮಾಡಲಿ. ಈ ಬಗ್ಗೆ ನನ್ನ ಆಕ್ಷೇಪವೇನೂ ಇಲ್ಲ. ಧರ್ಮಸ್ಥಳ, ಧರ್ಮ ಬಿಡಿ ಎಂದು ನಾನು ಹೇಳಲು ಬರುವುದಿಲ್ಲ. ಆದರೆ, ಕೊನೆಯದಾಗಿ ಧರ್ಮ ಉಳಿಯಬೇಕು ಎಂದಿದ್ದಾರೆ

 

Recent Articles

spot_img

Related Stories

Share via
Copy link
Powered by Social Snap