ನಾಯಕನಹಟ್ಟಿ :
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕರ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತು ಹಾಗೂ ಅನುಮಾನವ ವ್ಯಕ್ತಿಗಳು ಕಂಡು ಬಂದಲ್ಲಿ ಆಟೋ ಚಾಲಕರು ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸ್ ತಳಕು ವೃತ್ತ ನಿರೀಕ್ಷಕ ಹನುಮಂತಪ್ಪ ಎಂ ಶಿರೇಹಳ್ಳಿ ಹೇಳಿದರು.
ನಂತರ ಮಾತನಾಡಿದ ಅವರು ನಾಯಕನಹಟ್ಟಿ ಪಟ್ಟಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವಾಗಿರುವುದರಿಂದ ದಿನಬೆಳಗಾದರೂ ಸಾವಿರಾರು ಭಕ್ತರು ಸ್ವಾಮಿಯ ದರ್ಶನ ಪಡೆಯಲು ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ರಾತ್ರಿ ಹಗಲು ಎನ್ನದೇ ಆಟೋ ಚಾಲಕರು ಪಟ್ಟಣದಲ್ಲಿ ಸಂಚರಿಸುತ್ತೀರ ಅನುಮಾನಾಸ್ಪದ ವ್ಯಕ್ತಿಗಳು, ಮಾದಕ ವಸ್ತು ಮಾರಾಟ, ಸೇವನೆ ಮಾಡುವುದು ಕಂಡು ಬಂದರೆ ಇಲಾಖೆ ಗಮನಕ್ಕೆ ತಂದು ಪೊಲೀಸ್ ಇಲಾಖೆಯೊಂದಿಗ ಕೈಜೋಡಿಸಿ ಎಂದು ಹೇಳಿದರು.
ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಮತ್ತು ಉಪಯೋಗಿಸುವುದು ಅಪರಾಧ. ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಯಾರಾದರೂ ಮಾದಕ ವಸ್ತು ಮಾರಾಟ ಮತ್ತು ಉಪಯೋಗಿಸುವುದು ಕಂಡು ಬಂದರೆ ಇಲಾಖೆ ಗಮನಕ್ಕೆ ತರಬೇಕು. ಏಕೆಂದರೆ ಇದರ ಪರಿಣಾಮ ಎಷ್ಟು ಇದೆ ಎಂದರೆ ಗಾಂಜಾ ಸೇವಿಸಿದ ವ್ಯಕ್ತಿ ತಾನು ಏನು ಮಾಡುತ್ತೇನೆ ಎಂಬುದೇ ಅರಿವು ಆಗುವುದಿಲ್ಲ.
ಕಳೆದ ಎರಡು ತಿಂಗಳಿಂದ ಚಿತ್ರದುರ್ಗ ನಗರದಲ್ಲಿ ಗಾಂಜಾ ಸೇದಿ ಒಬ್ಬ ವ್ಯಕ್ತಿಯನ್ನು ಒಂದು ಹಾಕಲಾಗಿದೆ. ಗಾಂಜಾ ಉಪಯೋಗಿಸುವ ವ್ಯಕ್ತಿ ಏನು ಮಾಡುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಅಷ್ಟು ಪರಿಣಾಮಕಾರಿಯಾಗಿರುತ್ತದೆ ಮಕ್ಕಳ ಕೈಗೆ ಸಿಕ್ಕರೆ ಮಾದಕ ವಸ್ತುಗಳ ವ್ಯಸನಿಗಳಾಗುತ್ತಾರೆ. ಆದ್ದರಿಂದ ಪ್ರಜ್ಞಾವಂತ ಪ್ರಜೆಗಳಾದ ನೀವುಗಳು ಮಾಹಿತಿ ದೊರೆತರೆ ಇಲಾಖೆ ಗಮನಕ್ಕೆ ತನ್ನಿ ಎಂದು ಹೇಳಿದರು.
ನಂತರ ಪಿಎಸ್ಐ ಪಾಂಡುರಂಗಪ್ಪ ಎಸ್ ಮಾತನಾಡಿ ಆಟೋ ಚಾಲಕರು ಮತ್ತು ಮಾಲೀಕರು ಸರಿಯಾದ ಸಮಯಕ್ಕೆ ವಾಹನಗಳ ದಾಖಲೆಗಳನ್ನು ನವೀಕರಣ ಮಾಡಿಕೊಳ್ಳಬೇಕು. ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಿ, ಚಾಲಕರ ಸಮವಸ್ತ್ರ ಧರಿಸಬೇಕು. ಕುಡಿದು ವಾಹನ ಚಲಾಯಿಸಬೇಡಿ ವಾಹನದ ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಕರನ್ನು ಕೂರಿಸಿಕೊಳ್ಳಬೇಕು. ಶಾಲಾ ಮಕ್ಕಳ ಬಗ್ಗೆ ನಿರ್ಲಕ್ಷ ಮಾಡಬೇಡಿ, ಕಾನೂನು ಉಲ್ಲಂಘನೆ ಮಾಡಿದರೆ ಯಾವುದೇ ಮುಲಾಜಿ ಇಲ್ಲದೆ ದಂಡ ಹಾಕಲಾಗುವುದು. ಅಪಘಾತ ಸಂಭವಿಸಿದ್ದು ಕಂಡರೆ ಮಾಹಿತಿ ನೀಡಿ ನೋಡಿ ನೋಡದೆ ಹೋಗಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಮತ್ತು ಆಟೋ ಚಾಲಕರು ಹಾಜರಿದ್ದರು.
