AI ರಚಿತ ಚಾಯ್‌ವಾಲಾ ವಿಡಿಯೋದಲ್ಲಿ ನರೇಂದ್ರ ಮೋದಿ

ನವದೆಹಲಿ: 

   ಪ್ರಧಾನಿ ಮೋದಿಗೆ  ಚಾಯ್‌ ವಾಲಾ ಎಂದು ಟೀಕಿಸುತ್ತಿದ್ದ ವಿಪಕ್ಷಗಳು ಇದೀಗ ಭಾರೀ ಎಡವಟ್ಟೊಂದನ್ನು ಮಾಡಿದೆ. ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಚಹಾ ಮಾರುತ್ತಿರುವುದನ್ನು ತೋರಿಸುವ ವಿಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ನಿನ್ನೆ ತಡರಾತ್ರಿ, ಕಾಂಗ್ರೆಸ್ ನಾಯಕಿ ರಾಗಿಣಿ ನಾಯಕ್ ಅವರು ಜಾಗತಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಕೆಟಲ್ ಮತ್ತು ಗ್ಲಾಸ್‌ಗಳೊಂದಿಗೆ ನಡೆಯುವುದನ್ನು ತೋರಿಸುವ AI- ರಚಿತ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

    ಪ್ರಧಾನಿ ಮೋದಿ ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ ಚಹಾ ಮಾರುತ್ತಿದ್ದರು. ಗುಜರಾತ್‌ನ ವಡ್ನಗರ ನಿಲ್ದಾಣದಲ್ಲಿ ತಮ್ಮ ತಂದೆ ಚಹಾ ಅಂಗಡಿ ನಡೆಸುತ್ತಿದ್ದರು ಮತ್ತು ಬಾಲ್ಯದಲ್ಲಿ ತಾನು ಅದೇ ಕೆಲಸ ಮಾಡುತ್ತಿದ್ದೆ ಎಂದು ಅವರೇ ಸ್ವತಃ ಹೇಳಿಕೊಂಡಿದ್ದರು. 2014 ರ ಲೋಕಸಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ಹಿರಿಯ ಮಣಿಶಂಕರ್ ಅಯ್ಯರ್ ಅವರು ನರೇಂದ್ರ ಮೋದಿಯವರ ಈ ಹಿನ್ನೆಯನ್ನು ಚಾಯ್‌ ವಾಲಾ ಎಂದು ಅಣುಕಿಸಿದ್ದರು ಮತ್ತು ಅವರು ಎಂದಿಗೂ ಉನ್ನತ ಹುದ್ದೆಯನ್ನು ಪಡೆಯುವುದಿಲ್ಲ ಎಂದು ಹೇಳಿದ್ದರು. 

    ಇದೀಗ ಮತ್ತೆ ಕಾಂಗ್ರೆಸ್‌ ಪ್ರಧಾನಿಯವರ ಬಗ್ಗೆ ಮತ್ತೊಂದು ಸಲ ಚಾಯ್‌ ವಾಲಾ ಎಂದು ಟೀಕಿಸುತ್ತಿದೆ. ಸದ್ಯ ವೈರಲ್‌ ಪೋಸ್ಟ್‌ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕಾಂಗ್ರೆಸ್‌ ನಾಯಕತ್ವದ ಕೆಟ್ಟ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ” ಎಂದು ಬಿಜೆಪಿಯ ಹಿರಿಯ ನಾಯಕ ಸಿ.ಆರ್. ಕೇಶವನ್ ಹೇಳಿದ್ದಾರೆ. “ಕಾಂಗ್ರೆಸ್‌ನ ಈ ಅಸಹ್ಯಕರ ಟ್ವೀಟ್ 140 ಕೋಟಿ ಶ್ರಮಶೀಲ ಪ್ರತಿಭಾನ್ವಿತ ಭಾರತೀಯರಿಗೆ ಮಾಡಿದ ಘೋರ ಅವಮಾನವಾಗಿದೆ ಮತ್ತು ಇದು ಒಬಿಸಿ ಸಮುದಾಯದ ಮೇಲೆ ಕಾಂಗ್ರೆಸ್‌ನ ನೇರ ದಾಳಿಯಾಗಿದೆ” ಎಂದು ಅವರು ಹೇಳಿದರು. 

   ಬಡ ಹಿನ್ನೆಲೆಯಿಂದ ಬಂದಿರುವ ಒಬಿಸಿ ಸಮುದಾಯದ ಕಾಮದಾರ್ ಪ್ರಧಾನಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ” ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಹೇಳಿದ್ದಾರೆ. “ಅವರು ಈ ಹಿಂದೆಯೂ ಅವರ ಚಾಯ್‌ವಾಲಾ ಹಿನ್ನೆಲೆಯನ್ನು ಅಪಹಾಸ್ಯ ಮಾಡಿದ್ದರು. ಅವರು ಅವರನ್ನು 150 ಬಾರಿ ನಿಂದಿಸಿದ್ದರು. ಬಿಹಾರದಲ್ಲಿ ಅವರ ತಾಯಿಯನ್ನು ನಿಂದಿಸಿದ್ದರು. ಜನರು ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Recent Articles

spot_img

Related Stories

Share via
Copy link