ಬೆಳಗಾವಿ:
ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸೀರ್ ಹುಸೇನ್ ಅವರನ್ನು ನಾಲ್ಕನೇ ಅಪರಾಧಿಯನ್ನಾಗಿ ಮಾಡಬೇಕು. ತನಿಖೆ ಪೂರ್ಣಗೊಳ್ಳುವ ವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣ ವಚನ ಬೋಧನೆ ಮಾಡದಂತೆ ಉಪರಾಷ್ಟ್ರಪತಿಗೆ ಬಿಜೆಪಿ ಪತ್ರ ಬರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಮಾತನಾಡಿ ಅವರು, ದೇಶದ್ರೋಹಿಗಳಿಗೆ ಸೂತ್ರದಾರಿಗಳು ಯಾರು? ಪಾತ್ರದಾರಿಗಳು ಯಾರು ಎಂದು ಸಮಗ್ರ ತನಿಖೆ ನಡೆಸಿ ಸ್ಪಷ್ಟಪಡಿಸಬೇಕು. ನಾಸೀರ್ ಹುಸೇನ್ ಅವರನ್ನೂ ತನಿಖೆಗೊಳಪಡಿಸಬೇಕು. ಪ್ರಕರಣದಲ್ಲಿ ನಿರ್ದೋಶಿಯಾಗಿ ಹೊರಬರುವವರೆಗೆ ಪ್ರಮಾಣವಚನ ಸ್ವೀಕಾರ ಮಾಡಲು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.
ಪೊಲೀಸರ ಮೇಲೆ ಸರಕಾರ ಒತ್ತಡ ಹಾಕುತ್ತಿದೆ. ಎಫ್ ಎಸ್ ಎಲ್ ವರದಿಯನ್ನು ಯಾಕೆ ಬಹಿರಗೊಳಿಸುತ್ತಿಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದು ಯಾರೇ ಕೂಗಿದರೂ ಸಹ ಅವರು ದ್ರೋಹಿಗಳೇ.ಅಲ್ಲಿ ಜಾತಿ ಧರ್ಮ ಹಿಂದೂ ಮುಸ್ಲಿಂ ಅಂತ ಯಾವುದೂ ಬರಲ್ಲ ಎಂದು ವಿಜಯೇಂದ್ರ ಹೇಳಿದರು.