ನಾಟಿ ಔಷಧಿ ಸೇವಿಸಿ ಮೂವರು ಸಾವು

ಕಲಬುರಗಿ:

     ರಾಜ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕಲಬುರಗಿ  ಜಿಲ್ಲೆಯಲ್ಲಿ ಕುಡಿತದ ಚಟ  ಬಿಡಿಸಲು ನೀಡಿದ ನಾಟಿ ಔಷಧಿ  ಸೇವಿಸಿ ಮೂವರು ಸಾವನ್ನಪ್ಪಿರುವ ಶಾಕಿಂಗ್ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಸೇಡಂ ತಾಲ್ಲೂಕಿನ ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು(45) ಹಾಗೂ ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್(30) ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಎಂದು ಗುರುತಿಸಲಾಗಿದೆ.

    ಇದೇ ಔಷಧಿ ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪ ನರಸಿಂಹಲು ಅವರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಡಿತದ ಚಟ ಬಿಡಿಸುತ್ತೇನೆ ಎಂದು ಸಾಯಪ್ಪ ಮುತ್ಯಾ ಎಂಬಾತ ಮದ್ಯ ವ್ಯಸನಿಗಳ ಮೂಗಿನಲ್ಲಿ ನಾಟಿ ಔಷಧಿ ಹಾಕಿದ್ದರು. ಸಾಯಪ್ಪ ಮುತ್ಯಾ ನೀಡಿದ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Recent Articles

spot_img

Related Stories

Share via
Copy link