ನವದೆಹಲಿ:
ಮೋದಿ ವಿರುದ್ಧ ಟ್ವೀಟ್ ಮಾಡುವುದರಲ್ಲಿ ತನಗೆ ತಾನೆ ಸಾಟಿ ಎನ್ನುತ್ತಿದ್ದ ಕಾಂಗ್ರೆಸ್ ಪಕ್ಷ ದೇ ಪಕ್ಷದ ನಾಯಕ ಸಿಪಿ ಜೋಷಿಯವರ ಟ್ವೀಟ್ ಕುರಿತಂತೆ ಪ್ರಥಮ ಬಾರಿಗೆ ಮೌನ ಮುರಿದು ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಜೋಷಿ ಟ್ವೀಟ್ ಗೂ ಕಾಂಗ್ರೆಸ್ ಪಕ್ಷದ ಆದರ್ಶಗಳಿಗೂ ಅಜಗಜಾಂತರ ವ್ಯತ್ಯಾಸ ಎಂದು ಶುಕ್ರವಾರ ತಿಳಿಸಿದ್ದಾರೆ.
ಪ್ರಸ್ತುತ ದಿನಮಾನದಲ್ಲಿ ಸದಾ ಸುದ್ದಿಯಲ್ಲಿರು ಜಾಲತಾಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕೈಗನ್ನಡಿಯಾಗಿರುವ ಟ್ವಿಟರ್ ನಲ್ಲಿ ಸಿಪಿ ಜೋಷಿಯವರ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿಯವರು, ಜೋಷಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಆದರ್ಶಗಳು ಹಾಗೂ ಚಿಂತನೆಗಳಿಗೆ ಹೋಲಿಕೆ ಮಾಡಬಾರದು. ಯಾವುದೇ ಸಮುದಾಯ ಭಾವನೆಗಳಿಗೆ ನೋವಾಗುವಂತಹ ಹೇಳಿಕೆಯನ್ನು ಪಕ್ಷದ ನಾಯಕರು ನೀಡಬಾರದು ಎಂದು ಹೇಳಿದ್ದಾರೆ.
Shameful statement by Congress Leader CP Joshi. Implies what does a lower caste person like Modi know about Hinduism as only Brahmins are true custodians of Hinduism ! pic.twitter.com/JKhoKdYnnx
— Harsh Sanghavi (@sanghaviharsh) November 22, 2018