ಲಕ್ನೋ:
ಕೆಲ ದಿನಗಳ ಹಿಂದೆ ನಡೆದ ಬುಲಂದ್ ಶಹರ್ ನ ಸಿಯಾನಾ ಹಿಂಸಾಚಾರ ಪ್ರಕರಣದ ಪ್ರಧಾನ ಆರೋಪಿ ಬಿಜೆಪಿ ಯುವ ಮೋರ್ಚಾ ನಾಯಕ ಶಿಖರ್ ಅಗರ್ ವಾಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ .ಹಿಂಸಾಚಾರ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಸಿಂಗ್ ಅವರ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಶಿಖರ್ ಪ್ರಮುಖನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಹತ್ಯೆ ವಿಚಾರವಾಗಿ ಬುಲಂದ್ ಶಹರ್ ನಗರದಲ್ಲಿ ಡಿಸೆಂಬರ್ 3ರಂದು ನಡೆದಿದ್ದ ಹಿಂಸಾಚಾರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಸುಬೋಧ್ ಸಿಂಗ್ ಅವರನ್ನು ಹತ್ಯೆ ಮಾಡಲಾಗಿತ್ತು ಈ ಹತ್ಯೆಗೆ ಶಿಖರ್ ಅಗರ್ ವಾಲ್ ಕುಮ್ಮಕ್ಕು ನೀಡಿದ್ದರು ಎಂದು ತಿಳಿದು ಬಂದಿದೆ.