ಶ್ರೀನಗರ:
ಕಾಶ್ಮೀರದ ಉಗ್ರ ವಿರೋಧಿ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಸಂಬಂಧಿಸಿದಂತೆ ಲಷ್ಕರ್-ಇ-ತೊಯ್ಬಾ ಸಂಘಟನೆಯ ಉಗ್ರ ಮೊಹಮ್ಮದ್ ನವೀದ್ ಜುಟ್ ನನ್ನು ಬುಧವಾರ ಹತ್ಯೆ ಮಾಡಿದೆ ಭಾರತೀಯ ಸೇನಾಪಡೆ ಮಾಹಿತಿ ನೀಡಿದೆ.
ಕಾಶ್ಮೀರದ ಬಡಗಾಂವ್ ಜಿಲ್ಲೆಯ ಛಾತೇರ್ ಗಾಂವ್ ಎಂಬಲ್ಲಿ ಇಂದು ಮುಂಜಾನೆ ಸೇನಾಪಡೆಗಳು ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನವೀದ್ ಎಂಬ ಎಲ್ ಇ ಟಿ ಉಗ್ರನ ಹತ್ಯೆಯಾಗಿದೆ ಎಂದು ಮೂಲಗಳಿಂದ ಸ್ಪಷ್ಟವಾಗಿದೆ.
ಮನೆಯೊಂದರಲ್ಲಿ ಉಗ್ರರು ಅಡಗಿ ಕುಳಿತಿರುವ ವಿಚಾರ ತಿಳಿದ ಭದ್ರತಾ ಪಡೆಗಳು ಹಾಗೂ ಪೊಲೀಸರು ಉಗ್ರರು ಅಡಗಿಕುಳಿತಿದ್ದ ಸ್ಥಳವನ್ನು ಸುತ್ತುವರಿದ ಭದ್ರತಾ ಪಡೆಗಳು ಉಗ್ರರ ಮೇಲೆ ಗುಂಡಿನ ಮಳೆಗರೆದು ಎನ್ ಕೌಂಟರ್ ನಲ್ಲಿ ಪತ್ರಕರ್ತ ಬುಖಾರಿಯವರನ್ನು ಹತ್ಯೆ ಗೈದಿದ್ದ ಉಗ್ರ ನವೀದ್ ನನ್ನು ಹತ್ಯೆ ಮಾಡಿವೆ ಎಂದು ಮೂಲಗಳಿಂದ ದೃಢ ಪಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








