ಗುಂಟೂರು:
ಆಂಧ್ರಪ್ರದೇಶದ ಸಮಗ್ರ ಅಭಿವೃದ್ಧಿ ವಿಚಾರವಾಗಿ ನೀಡಿದ್ದ ಭರವಸೆಗಳ ವಿಚಾರದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ನಾ.ರಾ. ಚಂದ್ರಬಾಬು ನಾಯ್ಡು ರಾಜ್ಯದ ಜನೆತೆಗೆ ದ್ರೋಹ ಮಾಡಿದ್ದಾರೆ.
ಅಲ್ಲದೆ ಚಂದ್ರಬಾಬುನಾಯ್ಡು ಈ ಹಿಂದಿನ ಯೋಜನೆಗಳನ್ನೇ ಪುನರಾವರ್ತಿಸುತ್ತಿದ್ದಾರೆ ಎಂದು ನರೇಂದ್ರ ಮೋದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲುಗು ನಾಡಿನ ಅಣ್ಣವ್ರು ಎಂದೇ ಖ್ಯಾತರಾದ ಸ್ವರ್ಗೀಯ ಶ್ರೀ ಎನ್ ಟಿ ರಾಮರಾವ್ ಅವರು ಆಂಧ್ರ ಪ್ರದೇಶವನ್ನು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿಸಲು ಈ ಪಕ್ಷ ಸ್ಥಾಪಿಸಿದರು.
ಆದರೆ ಅವರ ಅಳಿಯ ಚಂದ್ರಬಾಬು ಪದೇ ಪದೇ ಚಂಚಲ ಮನಸ್ಸಿನಿಂದ ಮೈತ್ರಿಯನ್ನು ಬದಲಾಯಿಸುತ್ತಾ ಜನತೆಗೆ ಅನ್ಯಾಯ ಮಾಡಿದ್ದಾರೆ.ಈ ಚಂಚಲ ಮನಸ್ಸಿನಿಂದಲೇ ಚುನಾವಣೆಗಳಲ್ಲಿ ಸೋಲುತ್ತಾ ತಮ್ಮ ಮಾವ ಎನ್ ಟಿಆರ್ ಕನಸು ಮತ್ತು ಆಸೆಗಳನ್ನು ನುಚ್ಚುನೂರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.