ನವದೆಹಲಿ:
ಆಧಾರ್ ವಿರುದ್ಧ ಧಾಳಿ ಸಂವಿಧಾನಕ್ಕೆ ವಿರೋಧ ಎಂದು ಐವರು ನ್ಯಾಯಾಧೀಶರ ಪೀಠವು ತೀರ್ಪು ನೀಡಿ ಆದೇಶಿಸಿದೆ.
ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತವಾಗಿದ್ದು, ಖಾಸಗಿತನವು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದೆ.ಅಲ್ಲದೆ, ಆಧಾರ್ ದೇಶದ ಶ್ರೀಸಾಮಾನ್ಯನ ಗುರುತಾಗಿದ್ದು,ಈ ಆಧಾರ್‍ನಿಂದ ದುರ್ಬಲರ ಸಶಕ್ತೀಕರಣವಾಗಿದೆ.ಆಧಾರ್ ಕಾರ್ಡ್ ಸಂಪೂರ್ಣ ಸುರಕ್ಷಿತವಾಗಿದ್ದು, ಸಮಾಜದ ಹಿತದೃಷ್ಟಿಯಿಂದ ಕೆಲ ನಿರ್ಬಂಧಗಳು ಸಾಧ್ಯ, ಎಂದು 40 ಪುಟಗಳ ತೀರ್ಪನ್ನು ನ್ಯಾಯಾಧೀಶರಾದ ಎ.ಕೆ.ಸಿಕ್ರೀ ಅವರು ಓದಿದರು.
ಆಧಾರ್ ತಿರುಚಲು ಮತ್ತು ನಕಲು ಮಾಡಲು ಸಾಧ್ಯವಿಲ್ಲ. ಯೋಜನೆಗಳ ಫಲಾನುಭವಿಗಳಿಗೆ ಈ ಆಧಾರ್‍ನಿಂದ ಅನುಕೂಲವಾಗಲಿದ್ದು, ನಕಲಿ ಮಾಡಲು ಅವಕಾಶವಿದ್ದರೆ, ಅದನ್ನು ತಡೆಗಟ್ಟಿ ಎಂದಿರುವ ಕೋರ್ಟ್, ಸಮಾಜದ ಹಿತದೃಷ್ಟಿಯಿಂದ ಕೆಲ ನಿರ್ಬಂಧ ಅಗತ್ಯವಾಗಿದ್ದು, ಆಧಾರ್ ಕಾರ್ಡ್‍ನಲ್ಲಿರುವ ಮಾಹಿತಿಯನ್ನು ತಿರುಚಲು ಸಾಧ್ಯವಿಲ್ಲ ಎಂದಿರುವ ಕೋರ್ಟ್ ಆಧಾರ್ ಕಾಯ್ದೆ ಸೆಕ್ಷನ್ 32(2) ರದ್ದುಗೊಳಿಸಿದೆ. ಆಧಾರ್ ನಿಂದ ಸಮಾಜಕ್ಕೆ ಅನುಕೂಲವಾಗಲಿದ್ದು, ರಾಷ್ಟ್ರೀಯ ಭದ್ರತಾ ಹಿತ ದೃಷ್ಟಿಯಿಂದ ಮಾಹಿತಿಯನ್ನು ಬಹಿರಂಗ ಮಾಡದಂತೆ ರದ್ದುಗೊಳಿಸಿದೆ.
ಒಂದು ವೇಳೆ ಆಧಾರ್‍ನಲ್ಲಿ ಲೋಪಧೋಷಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ, ಖಾಸಗಿ ಒಡೆತನಕ್ಕೆ ಸೇರಿದ ಸಂಸ್ಥೆಗಳು. ಮಾಹಿತಿ ಸಂಗ್ರಹಿಸುವಂತಿಲ್ಲ, ಸರ್ಕಾರದ ಯೋಜನೆಗಳಿಗೆ ಮಾತ್ರ ಇದು ಕಡ್ಡಾಯವಾಗಿದೆ. ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕ್‍ಗಳಲ್ಲಿ ಆಧಾರ್ ಮಾತ್ರ ಕಡ್ಡಾಯವಲ್ಲ,ಈ ಆಧಾರ್ ಕಾಯ್ದೆಯಿಂದ ಉತ್ತಮ ಖಾಸಗೀತನವು ಘನತೆಯಿಂದ ಬದುಕನ್ನು ಹಕ್ಕನ್ನು ಹೊಂದಿದೆ.
ಆಧಾರ್ ಶ್ರೀ ಸಾಮಾನ್ಯನ ಗುರುತಾಗಿದ್ದು, ದೇಶದಲ್ಲಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಈ ಆಧಾರ್ ಸಂಖ್ಯೆಗೆ ಕನಿಷ್ಠ ಅಂಕಿ-ಅಂಶ ಸಂಗ್ರಹಿಸಬಹು ದಾಗಿದೆ.
ಸಿಬಿಎಸ್‍ಇ ಮತ್ತು ನೀಟ್‍ನಲ್ಲಿ ಆಧಾರ್ ಕಡ್ಡಾಯವಲ್ಲ, ಸರ್ಕಾರಿ ಯೋಜನೆಗಳಿಗೆ ಮಾತ್ರ ಕಡ್ಡಾಯವಾಗಿದೆ. ಮೊಬೈಲ್ ಸಂಖ್ಯೆ ಜೋಡಣೆಗೆ ಕಡ್ಡಾಯವಾಗಿಲ್ಲ, ಪ್ಯಾನ್ ಕಾರ್ಡ್ ಮತ್ತು ಐಟಿ ರಿಟನ್ಸ್ ಸಲ್ಲಿಕೆಗೆ ಕಡ್ಡಾಯವಾಗಿದೆ ಎಂದು ಕೆಲವೊಂದು ನಿರ್ಬಂಧ ವಿಧಿಸಿ, ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ