ಮುಂಬೈ
ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಗಳ ನಡುವಿನ ಐಪಿಎಲ್ 3ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ, ಮುಂಬೈಗೆ 214 ರನ್ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡ ಬ್ಯಾಟಿಂಗ್‍ಗೆ ಇಳಿದಿದ್ದು, ರಿಷಬ್ ಪಂತ್ ಸ್ಫೋಟಕ 78* (27 ಎಸೆತ) ರನ್ ಬಾರಿಸಿ ತಂಡ ಅತ್ಯಧಿಕ ರನ್ ಪೇರಿಸಲು ನೆರವಾದರು. ಡೆಲ್ಲಿ ತಂಡದಲ್ಲಿ ಶಿಖರ್ ಧವನ್ 43, ಕಾಲಿನ್ ಇನ್‍ಗ್ರಾಮ್ 47 ರನ್ ಕೊಡುಗೆಯೊಂದಿಗೆ 20 ಓವರ್‍ಗೆ 6 ವಿಕೆಟ್ ಕಳೆದು 213 ರನ್ ಕಲೆ ಹಾಕಿತ್ತು.
ಆರಂಭದಿಂದಲೇ ಭರ್ಜರಿ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮುಂಬೈ ಇಂಡಿಯನ್ಸ್ ತಂಡವೂ ಪೈಪೋಟಿ ನೀಡಿದೆ. ಡೆಲ್ಲಿ ತಂಡದ ಆಟವನ್ನು ಮಣಿಸಲು ಮುಂಬೈ ತಂಡವು ಭರ್ಜರಿಯಾಗಿಯೇ ತಯಾರಿ ನಡೆಸಿತ್ತು. ಅಂತೆಯೇ 6 ವಿಕೆಟ್‍ಗಳನ್ನು ಕಬಳಿಸಿದ ಮುಂಬೈ ತಂಡವು ಡೆಲ್ಲಿ ತಂಡ ನೀಡಿದ್ದ 214ರನ್‍ಗಳನ್ನು ಬೆನ್ನತ್ತಿ ಮುಂಬೈ ಇನ್ನಿಂಗ್ಸ್ ಮುಂದುವರೆಸಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ (ಸಿ), ರಿಷಬ್ ಪಂತ್ (ವಿಕೆ), ಕಾಲಿನ್ ಇಂಗ್ರಾಮ್, ಕೀಮೋ ಪಾಲ್, ಆಕ್ಸರ್ ಪಟೇಲ್, ರಾಹುಲ್ ತೆವಾಟಿಯ, ಕಾಗಿಸೊ ರಬಾಡಾ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮಾ
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಯುವರಾಜ್ ಸಿಂಗ್, ಕೀರಾನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಬೆನ್ ಕಟಿಂಗ್, ಮಿಚೆಲ್ ಮ್ಯಾಕ್ಕ್ಲೆನಾಘನ್, ರಾಸಿಕ್ ಸಲಾಮ್, ಜಸ್‍ಪ್ರೀತ್ ಬೂಮ್ರಾ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








