ನವದೆಹಲಿ
ಭಾರತದ ಪ್ರತಿಷ್ಠಿತ ಚಂದ್ರಯಾನ್ 2 ತೆಗೆದ ಚಂದ್ರನ ಮೊದಲ ಚಿತ್ರವನ್ನು ಇಸ್ರೋಗೆ ಕಳುಹಿಸಿದೆ,ಅದನ್ನು ಇಸ್ರೋ ತನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಚಂದ್ರನ ಮೇಲ್ಮೈಯಿಂದ ಸುಮಾರು 2,650 ಕಿ.ಮೀ ಎತ್ತರದಿಂದ ಸೆರೆಹಿಡಿಯಲಾಗಿದೆ ಎಂದು ಇಸ್ರೋ ಹೇಳಿದೆ.ಚಿತ್ರವು ಎರಡು ಗಮನಾರ್ಹ ಹೆಗ್ಗುರುತುಗಳನ್ನು ತೋರಿಸಿದ್ದು, ಅಪೊಲೊ ಕುಳಿ ಮತ್ತು ಮೇರೆ ಓರಿಯಂಟೇಲ್ ಜಲಾನಯನ ಪ್ರದೇಶವನ್ನು ಗುರುತಿಸಿದೆ ಎಂದು ಇಸ್ರೋ ತಿಳಿಸಿದೆ.
ಅಪೊಲೊ ಕುಳಿ ಚಂದ್ರನ ದಕ್ಷಿಣ ಗೋಳಾರ್ಧದಲ್ಲಿದೆ ಮತ್ತು ಪಶ್ಚಿಮ ರಿಮ್‌ನ ಪಕ್ಕದಲ್ಲಿರುವ ಮತ್ತೊಂದು ದೊಡ್ಡ ಕುಳಿ ಒಪೆನ್ ಹೈಮರ್ ಅನ್ನು ಒಳಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ