ಗಡಿಯಲ್ಲಿ ಚೀನಾದಿಂದ 5000 ಸೈನಿಕರ ಜಮಾವಣೆ..!

ಲಡಾಖ:

     ಭಾರತ ಮತ್ತು ಚೀನಾ ನಡುವಿನ ಲೈನ್ ಆಫ್ ಕಂಟ್ರೋಲ್ ನಲ್ಲಿ  ಚೀನಾದ ಪೀಪಲ್ಸ್ ಲಿಬರೇಷನ್ ಟ್ರೂಪ್ಸ್ ನ 5 ಸಾವಿರ ಸೈನಿಕರನ್ನು ನಿಯೋಜಿಸಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಎಲ್ಓಸಿಯಲ್ಲಿ ನಾವು ಸಹ ಸೈನಿಕ ಬಲವನ್ನು ಹೆಚ್ಚಿಸುತ್ತೇವೆ ಎಂದು ಹೇಳಿದೆ. 

      ಪೀಪಲ್ಸ್ ಲಿಬರೇಶನ್ ಟ್ರೂಪ್ಸ್ ನಮ್ಮ ಭೂಭಾಗದಲ್ಲಿ ಯಾವುದೇ ರೀತಿಯ ಅತಿಕ್ರಮಣ ನಡೆಸದಂತೆ ಮುಂಜಾಗೃತೆ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಪ್ರಸ್ತುತ, ಚೀನಾ ತನ್ನ ಎಲ್‌ಎಸಿಯ ಬದಿಯಲ್ಲಿ ಭಾರೀ ಮಟ್ಟದಲ್ಲಿ ಸೈನೆಯನ್ನು ನಿಯೋಜಿಸಿದೆ.   ತಿರುಗಿಸಿದೆ. ಚೀನಾ ಭಾರತೀಯ ಸೇನೆಯ 81 ಮತ್ತು 114 ಬ್ರಿಗೇಡ್‌ಗಳ ಅಡಿಯಲ್ಲಿರುವ ಪ್ರದೇಶಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯಾದ್ಯಂತ ಅವರನ್ನು ಸಣ್ಣ ಸಣ್ಣ ತುಕಡಿಗಳನ್ನು ನಿಯೋಜಿಸಿದೆ.

    ಇದೇ ವೇಳೆ ದೌಲತ್ ಬೇಗ್ ಓಲ್ಡಿ ಮತ್ತು ಪಾಂಗೊಂಗ್ ತ್ಸೊ ಸರೋವರ ಬಳಿಯಲ್ಲಿ ಚೀನಿಯರು ಸೈನಿಕರು ಭಾರೀ ವಾಹನಗಳಲ್ಲಿ ನಿಜವಾದ ನಿಯಂತ್ರಣ ರೇಖೆಯ ಉದ್ದಕ್ಕೂ ಚಲಿಸಿದ್ದಾರೆ ಮತ್ತು ಭಾರತೀಯ ಭೂಪ್ರದೇಶದಲ್ಲಿದ್ದಾರೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.

    ಗಾಲ್ವಾನ್ ನಲಾ ಪ್ರದೇಶದ ಭಾರತೀಯ ರಸ್ತೆ ಕೆಎಂ120 ರಿಂದ ಸುಮಾರು 10-15 ಕಿ.ಮೀ ದೂರದಲ್ಲಿ ಡೇರೆಗಳನ್ನು ಹಾಕಿದ್ದಾರೆ. ಮೂಲಗಳ ಪ್ರಕಾರ ಚೀನೀಯರು ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಭಾರತ ಆಕ್ಷೇಪವೆತ್ತಿದ್ದು ಇದಕ್ಕೆ ಚೀನಾ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದಾಗಿ ವಾದಿಸಿದೆ. 

    ಭಾರತೀಯ ಸೇನೆಯು ಗಲ್ವಾನ್ ನಲಾ ಬಳಿ ಭಾರತೀಯ ಪೆಟ್ರೋಲಿಂಗ್ ಪಾಯಿಂಟ್ 14ರ ಬಳಿ ಸೇತುವೆಯನ್ನು ನಿರ್ಮಿಸುತ್ತಿದೆ.  ಇದಕ್ಕೆ ಚೀನೀಯರು ಆಕ್ಷೇಪಣೆಗಳನ್ನು ಎತ್ತಿದರು. ಸದ್ಯ 70 ಬ್ರಿಗೇಡ್‌ನಡಿ ಪೂರ್ವ ಲಡಾಖ್‌ನ ಇತರ ಪ್ರದೇಶಗಳಲ್ಲಿ, ಹಿಮಾಚಲ ವಲಯದಲ್ಲಿ ಮತ್ತು ಉತ್ತರಾಖಂಡದ ಗಡಿ ಸೇರಿದಂತೆ ಎಲ್‌ಎಸಿಯ ಕೇಂದ್ರ ವಲಯದಲ್ಲಿ, ಭಾರತೀಯ ಸೇನೆಯು ತನ್ನ ಸೈನ್ಯಯನ್ನು ಹೆಚ್ಚಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link