ನವದೆಹಲಿ:
ಗಲ್ವಾನ್ ಘಟಣೆ ಇತಿಹಾಸದ ಸಣ್ಣ ಕ್ಷಣವಷ್ಟೇ,ಚೀನಾ ಹಾಗೂ ಭಾರತ ಎರಡೂ ಪುರಾತನ ಸಂಸ್ಕೃತಿಗಳು, ಎರಡೂ ಪರಸ್ಪರ ಗೌರವಿಸಬೇಕು, ಎರಡೂ ಸಮಾನ ರಾಷ್ಟ್ರಗಳೆಂದು ಅರಿಯಬೇಕು, ಭಿನ್ನಾಭಿಪ್ರಾಯಗಳ ವಿಷಯದಲ್ಲಿ ಸಮಾನ ಅಂಶಗಳನ್ನು ಪರಿಗಣಿಸಬೇಕು ಎಂದು ಚೀನಾ ರಾಯಭಾರಿ ಸನ್ ವೀಡಾಂಗ್ ಹೇಳಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳು, ಒಂದೇ ಸಮಯದಲ್ಲಿ ಒಂದೇ ವಿಷಯದ ಪರಿಣಾಮದಿಂದ ಹಾಳಾಗಬಾರದು ಎಂದು ಹೇಳಿರುವ ಚೀನಾ ರಾಯಭಾರಿಯ ಹೇಳಿಕೆಯಲ್ಲಿ ಈಗಿನ ಸಂದರ್ಭಕ್ಕೆ ಆಳವಾದ ಅರ್ಥ ಧ್ವನಿಸುತ್ತಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಗಲ್ವಾನ್ ಘರ್ಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಚೀನಾ ರಾಯಭಾರಿ, ಇತಿಹಾಸದ ದೃಷ್ಟಿಯಿಂದ ನೋಡಿದರೆ ಗಲ್ವಾನ್ ಘರ್ಷಣೆ ಸಣ್ಣ ಘಟನೆಯಾಗಿದೆ. ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಾಗ ಉಭಯ ಪಕ್ಷಗಳೂ ಸಮಾನ ಅಂಶಗಳನ್ನು ಪರಿಗಣಿಸಬೇಕೆಂದು ಹೇಳಿದ್ದಾರೆ.
