ಬ್ಯಾನ್ ಆಗಿರುವ ಆ್ಯಪ್ ಗಳಿಗೆ ಪರ್ಯಾಯವಾದ ದೇಸೀ ಆ್ಯಪ್ ಗಳು…!
ನವದೆಹಲಿ
ದೇಶದ ಸಮಗ್ರತೆ ಮತ್ತು ಭದ್ರತೆ ದೃಷ್ಠಿಯಿಂದ ನೆರೆಯ ಚೀನಾ ದೇಶದ 59 ಆ್ಯಪ್ ಗಳನ್ನು ಬ್ಯಾನ್ ಮಾಡಿರುವ ಭಾರತದಲ್ಲಿ ಬ್ಯಾನ್ ಆಗಿರುವ ಆ್ಯಪ್ ಗಳಿಗೆ ಪರ್ಯಾಯವಾಗಿ ಸಾಕಷ್ಟು ಆ್ಯಪ್ ಗಳು ಹುಟ್ಟಿಕೊಂಡಿವೆ.
ಟಿಕ್‌ಟಾಕ್ ನಿಷೇಧವಾಗುತ್ತಲೇ, ಅದೇ ರೀತಿಯ ಫೀಚರ್ ಹೊಂದಿರುವ ರೋಪೊಸೊ, ಚಿಂಗಾರಿ ಮತ್ತು ಮಿತ್ರೊ ಆ್ಯಪ್‌ಗಳು ಈಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್ ಟಾಪ್ ಡೌನ್‌ಲೋಡ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಜತೆಗೆ ಟಾಪ್ ಫ್ರೀ ಆ್ಯಪ್ ಪಟ್ಟಿಯಲ್ಲಿ ರೋಪೊಸೊ ಅತ್ಯಂತ ಹೆಚ್ಚು ಡೌನ್‌ಲೋಡ್ ದಾಖಲೆ ಹೊಂದಿದೆ. ಅದರ ಬಳಿಕದ ಸ್ಥಾನದಲ್ಲಿ ಚಿಂಗಾರಿ ಇದ್ದು, ನಂತರದಲ್ಲಿ ಮಿತ್ರೋ ಇದೆ.ದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಟಿಕ್‌ಟಾಕ್ ಬಳಕೆದಾರರು ಇದ್ದು, ಆ್ಯಪ್ ನಿಷೇಧದ ಬಳಿಕ ಅನಿವಾರ್ಯವಾಗಿ ಇತರ ಆ್ಯಪ್ ಬಳಕೆ ಮಾಡಬೇಕಾಗಿದೆ.ಜತೆಗೆ ಚೀನಾ ಆ್ಯಪ್ ಮತ್ತು ಸರಕು ಬಹಿಷ್ಕಾರ ಅಭಿಯಾನ, ಸ್ವದೇಶಿ ಬಳಕೆಗೆ ಉತ್ತೇಜನವೂ ಇದಕ್ಕೆ ಪೂರಕವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇಸಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದಾರೆ.