ದೇಶದ ಜನತೆಗೆ ದೀಪಾವಳಿ ಗಿಫ್ಟ್ ನೀಡಿದ ಕೇಂದ್ರ ಸರ್ಕಾರ

 ನವದೆಹಲಿ :

  ಕೊರೊನಾ ವೈರಸ್ʼನಿಂದಾಗಿ ಇಡೀ ಅರ್ಥ ವ್ಯವಸ್ಥೆ ಕುಸಿದಿದೆ. ಒಂಚೂರು ಉತ್ತಮ ಸ್ಥಿತಿಯಲ್ಲಿದ್ದವರು ಕೂಡ ಬಡವರಾಗಿ ಹೋಗಿದ್ದಾರೆ. ಹಾಗಾಗಿ ಮೋದಿ ಸರ್ಕಾರ ನವೆಂಬರ್‌ ವರೆಗೆ ಬಡವರಿಗೆ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಿತ್ತು. ಈಗ ಅದನ್ನ ಮಾರ್ಚ್ 2021ರವರೆಗೆ ವಿಸ್ತರಿಸಬಹುದು ಎಂದು ಹೇಳಲಾಗ್ತಿದೆ. ಅದ್ರಂತೆ, ಈ ಹಿಂದೆ ಕೇಂದ್ರ ಸರ್ಕಾರ ಜನ್ ಧನ್ ಖಾತೆಯಲ್ಲಿನ ಮಹಿಳೆಯರ ಖಾತೆಗೆ 1500 ರೂಪಾಯಿಗಳನ್ನ ಕಳುಹಿಸಿತ್ತು. ಈಗ ಹಬ್ಬದ ಹಿನ್ನೆಲೆಯಲ್ಲಿ ಬಡ ಮಹಿಳೆಯರ ಖಾತೆಗೆ ಮತ್ತೆ 1500 ರೂಪಾಯಿ ಸೇರಿಸಲಿದೆ ಎನ್ನಲಾಗ್ತಿದೆ. ಇನ್ನು ಬಡ ಕುಟುಂಬ ಸಂಭ್ರಮದಿಂದ ಹಬ್ಬವನ್ನ ಆಚರಿಸಲಿ ಎನ್ನುವುದೇ ಇದ್ರ ಉದ್ದೇಶವಾಗಿದೆ ಅಂತಲೂ ಹೇಳಲಾಗ್ತಿದೆ.

    ಬಡ ಮತ್ತು ದುರ್ಬಲ ಕುಟುಂಬಗಳ ಜನರಿಗೆ 3ನೇ ಉತ್ತೇಜನ ಪ್ಯಾಕೇಜ್ʼನ್ನ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸರಕಾರ ಬಡವರ ಕಲ್ಯಾಣ ಯೋಜನೆಯಡಿ ಧಾನ್ಯ ಮತ್ತು ಹಣ ಮಂಜೂರು ಮಾಡುವ ಬಗ್ಗೆ ಘೋಷಣೆ ಮಾಡಬಹುದು. ವಾಸ್ತವವಾಗಿ, 20 ಕೋಟಿಗೂ ಹೆಚ್ಚು ಮಹಿಳಾ ಜನ್ ಧನ್ ಖಾತೆದಾರರ ಖಾತೆಗೆ ಸರ್ಕಾರ 3 ತಿಂಗಳಲ್ಲಿ 1500 ರೂಪಾಯಿಗಳನ್ನು ಕಳುಹಿಸಿತ್ತು. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಪ್ರಧಾನ ಮಂತ್ರಿ ಜನಧನ ಯೋಜನೆ (ಪ್ರಧಾನ ಮಂತ್ರಿ ಜನಧನ್ ಯೋಜನೆ) ಜಾರಿಗೆ ತಂದಿದೆ ಎಂದು ವಿವರಿಸಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link