ಆರ್ಥಿಕ ಅಭಿವೃದ್ಧಿಗೆ ಮೋದಿ ನೀಡಿದ ಪಂಚ ತತ್ವಗಳು..!

ನವದೆಹಲಿ:

     ಭಾರತವನ್ನು ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿ ಮಾಡಲು ದೇಶದ ಜನತೆ ಐದು ವಿಷಯಗಳ ಕಡೆ ಹೆಚ್ಚಾಗಿ ಗಮನ ಹರಿಸಬೇಕಾಗಿದೆ ಅವುಗಳೆಂದರೆ ಉದ್ದೇಶ, ಸೇರ್ಪಡೆ, ಹೂಡಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆಗಳರಡೆಗೆ ನಾವು ಅತಿ ಮುಖ್ಯವಾಗಿ ಗಮನ ನೀಡಬೇಕಿದೆ ಎಂದು ಪ್ರಧಾನ ಮಂತ್ರಿಗಳು ನಡೆಸಿದ ವಿಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ.

    ಇದೇ ಮಾರ್ಚ್ 25ರಿಂದ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿದ್ದ ಲಾಕ್ ಡೌನ್, ನಂತರ ಅದರ ವಿಸ್ತರಣೆ ಬಳಿಕ ಸುಮಾರು ಎರಡು ತಿಂಗಳ ನಂತರ ಪ್ರಧಾನಿ ಆರ್ಥಿಕತೆ, ದೇಶದ ಚಟುವಟಿಕೆ ಬಗ್ಗೆ ಮಾತನಾಡಿದ್ದಾರೆ ,    ಇಂದು ದೇಶದ ಉನ್ನತ ಕೈಗಾರಿಕಾ ಸಂಸ್ಥೆ, ಭಾರತೀಯ ಉದ್ಯಮದ ಒಕ್ಕೂಟದ 125ನೇ ವರ್ಷಾಚರಣೆ ಪ್ರಯುಕ್ತ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ವೈರಸ್ ನಂತರ ಭಾರತ ಸೇರಿದಂತೆ ಜಗತ್ತು ಹಲವು ಬದಲಾವಣೆಗಳಿಗೆ ಒಗ್ಗಿಕೊಳ್ಳಬೇಕಿದೆ. ಇಂತಹ ಆನ್ ಲೈನ್ ಕಾರ್ಯಕ್ರಮಗಳು ಹೊಸ ಕ್ರಮವಾಗಿದೆ. ಭಾರತದ ಸಂಶೋಧನೆ, ಇಲ್ಲಿನ ನಾಯಕರು ಮತ್ತು ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆಯಿದೆ. ಹಿಂದಿನ ಅಭಿವೃದ್ಧಿ, ಬೆಳವಣಿಗೆಗೆ ಮತ್ತೆ ಭಾರತ ಬರಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

     ಕೊರೋನಾ ವೈರಸ್ ನಮ್ಮ ಬೆಳವಣಿಗೆಯ ವೇಗವನ್ನು ಕುಂಠಿತ ಮಾಡಿರಬಹುದು. ಆದರೆ ಇಂದು ಭಾರತ ಅನ್ ಲಾಕ್ ಡೌನ್ 1ಗೆ ತೆರೆದುಕೊಂಡಿದೆ ಎಂಬುದು ವಾಸ್ತವ. ಹಿಂದಿನ ಬೆಳವಣಿಗೆಯನ್ನು ಮತ್ತೆ ಪಡೆಯುವ ಕ್ರಿಯೆ ಈಗಾಗಲೇ ಆರಂಭವಾಗಿದೆ. ಸರಿಯಾದ ಸಮಯಕ್ಕೆ ಸರಿಯಾದ ಹೆಜ್ಜೆಯಿಡುತ್ತಿದ್ದೇವೆ. ಶಾರೀರಿಕ ಸಂಪನ್ಮೂಲಗಳಿಗೆ ನಾವು ತಯಾರಿ ನಡೆಸಿದ್ದು ಮಾತ್ರವಲ್ಲದೆ ಮಾನವ ಸಂಪನ್ಮೂಲಗಳನ್ನು ಕಾಪಾಡಲು ಪ್ರಯತ್ನಪಟ್ಟಿದ್ದೇವೆ ಎಂದರು.

     ಈ ಸಮಯದಲ್ಲಿ ಕೊರೋನಾ ಮಧ್ಯೆ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಿ ಭಾರತವನ್ನು ಸದೃಢಗೊಳಿಸುವುದು ನಮ್ಮ ಆದ್ಯತೆಯಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು, ನಿಗದಿತ ಕಾಲಮಿತಿಯೊಳಗೆ ಅದು ಜಾರಿಗೆ ಬರುವಂತೆ ಮಾಡುವುದೇ ನಮಗೆ ಸುಧಾರಣೆಯ ಅರ್ಥವಾಗಿದೆ. ಹೂಡಿಕೆ ಮತ್ತು ಉದ್ಯಮಕ್ಕೆ ಪರಿಸರಪೂರಕ ವಾತಾವರಣ ನಿರ್ಮಾಣ ಮಾಡಲು ನಾವು ಸತತ ಪ್ರಯತ್ನಿಸುತ್ತಿದ್ದೇವೆ ಎಂದರು.

    ನಮಗೆ ಭಾರತದಲ್ಲಿ ತಯಾರಾದ ವಸ್ತುಗಳು ಹೆಚ್ಚೆಚ್ಚು ಸಿಗಬೇಕು. ಭಾರತದಲ್ಲಿ ವಿಶ್ವದರ್ಜೆಯ ವಸ್ತುಗಳ ತಯಾರಿಕೆಗೆ ಒತ್ತು ನೀಡುವ ಮೂಲಕ ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಿಕೊಂಡು ಹೆಚ್ಚೆಚ್ಚು ಸ್ವಾವಲಂಬಿಗಳಾಗಬೇಕು ಎಂದು ಮೋದಿ ಹೇಳಿದರು.

    ಭಾರತ ತನ್ನ ಹಿಂದಿನ ಅಭಿವೃದ್ಧಿಯ ವೇಗಕ್ಕೆ ಖಂಡಿತಾ ಮರಳಲಿದೆ. ಇಷ್ಟು ವಿಶ್ವಾಸದಿಂದ ಹೇಗೆ ಹೇಳುತ್ತಿದ್ದೇನೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಭಾರತೀಯರ ಪ್ರತಿಭೆ, ಸಂಶೋಧನಾ ಸಾಮರ್ಥ್ಯ, ಕಠಿಣ ಶ್ರಮ, ಶ್ರದ್ಧೆ, ನಿಷ್ಠೆ, ಇಲ್ಲಿನ ಉದ್ಯಮಿಗಳು, ಕೆಲಸದ ಶಕ್ತಿ ಮೇಲೆ ನನಗೆ ನಂಬಿಕೆಯಿದೆ ಎಂದು ಆತ್ಮವಿಶ್ವಾಸದಿಂದ ನುಡಿದರು.

    ಒಂದು ಕಡೆ ಕೊರೋನಾ ವೈರಸ್ ಮಧ್ಯೆ ನಾವು ಸುರಕ್ಷಿತವಾಗಿರಬೇಕು, ವೈರಸ್ ಹರಡುವುದನ್ನು ನಾವು ನಿಯಂತ್ರಿಸಬೇಕು, ಆದರೆ ಅದೇ ಸಮಯದಲ್ಲಿ ಮತ್ತೊಂದೆಡೆ, ನಾವು ಆರ್ಥಿಕತೆಯನ್ನು ಮುಂದುವರಿಸಬೇಕಾಗಿದೆ, ಇದು ಸವಾಲಿನ ವಿಷಯ ಎಂದು ಮೋದಿ ಹೇಳಿದರು.

     ಇನ್ನು ದೇಶವನ್ನು ಮುನ್ನೆಡೆಸಲು ನಾವು ನೀವು ಆಯ್ಕೆ ಮಾಡಿದ ಜನನಾಯಕ ಅಥವಾ ನಾನು ನಿಮ್ಮ ಪ್ರಧಾನ ಸೇವಕ ಎಂದು ಹೇಳಿಕೊಳ್ಳುವ ಶ್ರೀ ನರೇಂದ್ರ ಮೋದಿ ಇಂದು ಮಾಡಿ ಸುದ್ದಿ ಘೋಷ್ಠಿಯಲ್ಲಿ ಯಾವುದೇರೀತಿಯ ಮುಖಗವಸನ್ನು ಹಾಕದೆ ನಿರ್ಲಕ್ಷಿಸಿದ್ದಾರೆ .ಇದೇ ಏನು ನಮ್ಮ ದೇಶದ ಜನತೆಗೆ ಒಬ್ಬ ಜನ ನಾಯಕ ನೀಡ ಬಹುದಾದ ಸಂದೇಶ. ಸಂದೇಶ ಎಷ್ಟೇ ಒಳ್ಳಯದಾದರೂ ಆಚರಣೆ ಸರಿಯಾಗಿದ್ದರೆ ಮಾತ್ರ ಅದು ಸರಿ ಇಲ್ಲಾ ಅದು ತಪ್ಪೆ.   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap