ರಾಜ್ಯ ಆಡಳಿತದಲ್ಲಿ ಒಂದು ಸಮುದಾಯವನ್ನು ಸಂಪೂರ್ಣ ತೆಗೆದುಹಾಕಲಾಗಿದೆ

ಜಮ್ಮು-ಕಾಶ್ಮೀರ

        ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಿದ ನಂತರ ಕಾಶ್ಮೀರ ಆಡಳಿತದಿಂದ ಮುಸಲ್ಮಾನರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಅದರ ಬದಲು ಪ್ರಮುಖ ಹುದ್ದೆಗಳು ಹಿಂದೂಗಳ ಪಾಲಾಗಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

     ನನಗೆ ಈ ಸಮಯದಲ್ಲಿ ಖುರಾನ್ ಪವಿತ್ರ ಗ್ರಂಥ ಶಕ್ತಿಯನ್ನು ನೀಡಿತು. ಸಾಮಾನ್ಯವಾಗಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಮಾಡಲಾಗುತ್ತದೆ. ಆದರೆ ಇಲ್ಲಿ ಭಾರತದ ಕಿರೀಟವೆನಿಸಿಕೊಂಡಿರುವ ಜಮ್ಮು-ಕಾಶ್ಮೀರ ವಿಚಾರದಲ್ಲಿ ತದ್ವಿರುದ್ಧವಾಗಿದೆ. ಇದು ನಮಗೆಲ್ಲರಿಗೂ ನೋವನ್ನುಂಟುಮಾಡಿದೆ. ಜಮ್ಮು-ಕಾಶ್ಮೀರ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಪ್ರದೇಶ. ಭಾರತ ಬಹುಸಂಖ್ಯಾತ ಹಿಂದೂ ರಾಷ್ಟ್ರ ಎಂದು ಸಂಪೂರ್ಣ ತಿಳುವಳಿಕೆ ಇದ್ದುಕೊಂಡೇ ನಾವು ಭಾರತದ ಜೊತೆಗೆ ಸೇರಿದ್ದೆವು. ಅಂದಿನ ಉನ್ನತ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್ , ಜವಹರಲಾಲ್ ನೆಹರೂ ಅವರು ಅಮೆರಿಕದಲ್ಲಿದ್ದಾಗ ಸಂವಿಧಾನ ವಿಧಿ 370ನ್ನು ತಂದಿದ್ದರು. ಬಹುಸಂಖ್ಯಾತ ಮುಸಲ್ಮಾನರ ಗೌರವ, ಘನತೆಯನ್ನು ಎತ್ತಿ ಹಿಡಿಯುತ್ತೇವೆ, ಕಾಪಾಡುತ್ತೇವೆ ಎಂಬ ಭರವಸೆಯೊಂದಿಗೆ ಸಂವಿಧಾನ ವಿಧಿ 370ನ್ನು ತಂದರು. ಈಗ ಎಲ್ಲಿಗೆ ಹೋಯಿತು?

   ಕೇಂದ್ರದ ನಾಯಕರು ನನಗೆ ಸಂಸತ್ತಿನಲ್ಲಿ ಮಾತನಾಡಲು ಕೂಡ ಬಿಡುವುದಿಲ್ಲ. ಅವರ ಉದ್ದೇಶ ಏನೆಂದು ನೀವು ಭಾವಿಸಿಕೊಳ್ಳಿ. ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರಿಂದ ಏನು ಪಡೆದುಕೊಂಡಿದ್ದೇವೆ, ಏನು ಕಳೆದುಕೊಂಡಿದ್ದೇವೆ ಎಂದು ಸದನದಲ್ಲಿ ಚರ್ಚೆ ಮಾಡೋಣ ಎಂದು ನಾವು ಕೇಳಿದೆವು. ಕಾಂಗ್ರೆಸ್ ನವರು ನಮ್ಮ ಜೊತೆ ಮಾತುಕತೆಗೆ ಜೊತೆಯಾಗುತ್ತೇವೆ ಎಂದರು. ಆದರೆ ಚರ್ಚೆ ನಡೆಯಲಿಲ್ಲ.

    ನನ್ನ ತಂದೆ, ನಾನು, ನನ್ನ ಮಗ, ಮುಫ್ತಿಯವರು ಅಥವಾ ಬೇರೆ ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಸರ್ಕಾರದ ಆಡಳಿತದಲ್ಲಿ ಹಿಂದು-ಮುಸ್ಲಿಮರಿಗೆ ಸಮಾನ ಅವಕಾಶವಿತ್ತು. ಇಂದು ಲೆಫ್ಟಿನೆಂಟ್ ಗವರ್ನರ್ ಇದ್ದಾರೆ, ಅವರು ಹಿಂದು, ಡಿಜಿ ಮತ್ತು ಇಬ್ಬರು ಐಜಿಗಳಿದ್ದಾರೆ, ಅವರು ಹಿಂದೂಗಳು. ನಾವಿದ್ದಾಗ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳಿದ್ದರು, ಆದರೆ ಇಂದು ಆ ಸಮಾನತೆ ಇಲ್ಲ, ಸಂಪೂರ್ಣವಾಗಿ ನಾಶವಾಗಿದೆ.

ಇಲ್ಲಿನ ಇಂಟರ್ನೆಟ್ ಸಂಪರ್ಕದ ಬಗ್ಗೆ ಹೇಳಿ,ದೇಶದ ಎಲ್ಲಾ ಕಡೆ 4ಜಿ ಸಂಪರ್ಕವಿದ್ದು, ಸದ್ಯದಲ್ಲಿಯೇ 5ಜಿ ಸಂಪರ್ಕ ಕೂಡ ಇರುತ್ತದೆ. ಹಾಗಾದರೆ ಇಲ್ಲಿನ ಮಕ್ಕಳಿಗೆ, ಉದ್ಯಮಿಗೆ ಅದರ ಸೌಕರ್ಯವಿಲ್ಲವೇಕೆ?370 ವಿಧಿ ರದ್ದುಪಡಿಸಿದ ನಂತರ ಕಣಿವೆ ಪ್ರದೇಶದ ಚಿತ್ರಣ ಸಂಪೂರ್ಣ ಬದಲಾಗುತ್ತದೆ ಎಂದು ದೊಡ್ಡ ದೊಡ್ಡ ಭರವಸೆ ಕೊಟ್ಟಿದ್ದರಲ್ಲ, ಅದೆಲ್ಲ ಎಲ್ಲಿಗೆ ಹೋಯಿತು, ಜಮ್ಮು-ಕಾಶ್ಮೀರವನ್ನು ಮೂರು ಕುಟುಂಬಗಳು ಲೂಟಿ ಮಾಡಿವೆ ಎನ್ನುತ್ತಾರೆ, ಹಾಗಾದರೆ ಇಲ್ಲಿ ಆಸ್ಪತ್ರೆಗಳು, ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳು ಹೇಗೆ ಸ್ಥಾಪನೆಯಾದವು,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link