ಬೆಂಗಳೂರು:
ಚೀನದೊಂದಿಗೆ ಯುದ್ಧದ ಮುನ್ಸೂಚನೆ ಕಂಡುಬರುತ್ತಿರುವ ಬೆನ್ನಲ್ಲೇ ರಕ್ಷಣ ಇಲಾಖೆಯು ಬಹು ನಳಿಕೆ ರಾಕೆಟ್ ಲಾಂಚರ್ “ಪಿನಾಕಾ’ ಖರೀದಿಸಲು ನಿರ್ಧರಿಸಿದೆ. 2,580 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಉದ್ದೇಶಿಸಿರುವ ಈ ಲಾಂಚರ್‌ಗಳನ್ನು ಚೀನ ಮತ್ತು ಪಾಕಿಸ್ಥಾನದ ಗಡಿಗಳಲ್ಲಿರುವ ಆರು ಸೇನಾ ರೆಜಿಮೆಂಟ್‌ಗಳಲ್ಲಿ ನಿಯೋಜಿಸಲು ತೀರ್ಮಾನಿಸಲಾಗಿದೆ.
ಇವು ಕೇವಲ 44 ಸೆಕೆಂಡ್‌ಗಳಲ್ಲಿ 12 ರಾಕೆಟ್‌ಗಳನ್ನು ಏಕಕಾಲದಲ್ಲಿ ಉಡಾಯಿಸುವ ಸಾಮರ್ಥ್ಯವನ್ನು ಒಳಗೊಂಡಿವೆ.DRDO ಅಭಿವೃದ್ಧಿಪಡಿಸಿದ ಪಿನಾಕಾ ಕ್ಷಿಪಣಿ ವ್ಯವಸ್ಥೆ ಪೂರೈಕೆಗೆ ಸಂಬಂಧಿಸಿ 3 ಭಾರತೀಯ ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಭಾರತ್ ಅರ್ಥ್ ಮೂವರ್ ಲಿ. (ಬಿಇಎಂಎಲ್) ಲಾಂಚರ್‌ಗಳಿಗೆ ಬಳಸಲಾಗುವ ಅತ್ಯಧಿಕ ಸಾಮರ್ಥ್ಯದ ವಾಹನಗಳನ್ನು (ಹೈ-ಮೊಬಿಲಿಟಿ ವೆಹಿಕಲ್) ನೀಡಲಿದೆ.
ಶೇ.70ರಷ್ಟು ದೇಶೀಯ
ಆರು ಸೇನಾ ರೆಜಿಮೆಂಟ್‌ಗಳು ಒಟ್ಟಾರೆ 114 ಲಾಂಚರ್‌ಗಳನ್ನು ಪಡೆದುಕೊಳ್ಳಲಿವೆ. ಈ ಶಸ್ತ್ರಾಸ್ತ್ರ ತಯಾರಿಕೆಗೆ ಬಳಕೆಯಾಗುವ ಉಪಕರಣಗಳಲ್ಲಿ ಶೇ. 70ರಷ್ಟು ದೇಶೀಯವಾಗಿರಲಿವೆ. 2024ರ ವೇಳೆಗೆ ಇವುಗಳ ಕಾರ್ಯಾಚರಣೆ ಆರಂಭವಾಗಲಿದೆ.ರಕ್ಷಣ ಸಚಿವಾಲಯವು ಪಿನಾಕಾ ಯೋಜನೆಗೆ ಅಗತ್ಯವಿರುವ 330 ಹೈ-ಮೊಬಿಲಿಟಿ ವೆಹಿಕಲ್‌ಗಳನ್ನು ಪೂರೈಸುವ ಹೊಣೆಯನ್ನು ಬಿಇಎಂಎಲ್‌ಗೆ ವಹಿಸಿದ್ದು, ಸುಮಾರು 842 ಕೋಟಿ ರೂ. ವೆಚ್ಚದಲ್ಲಿ ಇವು ಸಿದ್ಧಗೊಳ್ಳಲಿವೆ.
ಬಹು ನಳಿಕೆ ರಾಕೆಟ್ ಲಾಂಚರ್ ‘ಪಿನಾಕಾ’ವನ್ನು ಖಾಸಗಿ ಕೈಗಾರಿಕೆಗಳು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳ ಸಹಯೋಗದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲು ರಕ್ಷಣ ಸಚಿವಾಲಯ ಉದ್ದೇಶಿಸಿದೆ. ಇದು ಬಿಇಎಂಎಲ್ ಚೇತರಿಕೆಗೂ ನೆರವಾಗಲಿದೆ’ ಎಂದು ನಿಗಮದ ಅಧ್ಯಕ್ಷ ಮತ್ತು ಎಂಡಿ ದೀಪಕ್ ಕುಮಾರ್ ಹೊಟಾ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
