ರಾಹುಲ್ ಗಾಂಧಿ ಬಂಧನ..!

ಲಖನೌ:

    ಇಡೀ ದೇಶದಲ್ಲಿ ಸಂಚಲನ ಎನ್ನುವುದಕ್ಕಿಂತ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರಿತಿಯ ಭದ್ರತೆ ಇದೆ ಎನ್ನುವುದಕ್ಕೆ ಜ್ವಲಂತ ಉದಾಹರಣೆಯಾಗಿರುವ ಹತ್ರಾಸ್ ಪ್ರಕರಣದ ಕುರಿತಾಗಿ ವಸ್ತನಿಷ್ಠವಾಗಿ ಏನಾಗಿದೆ ಎಂದು ತಿಳಿಯಲೆಂದು ಇಂದು ಉ.ಪ್ರದೇಶಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರನ್ನು ಹತ್ರಾಸ್ ಗ್ರಾಮದ ಗಡಿಗೂ ಬಿಡದೆ ಉ.ಪ್ರದೇಶ ಸರ್ಕಾರ ಕ್ರೌರ್ಯಮೆರೆದಿದೆಯಲ್ಲದೇ ಅವರನ್ನು ಹತ್ರಾಸ್ ಬಳಿ ಸೆ.188ರ ಅನ್ವಯ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

    ಭಾರಿ ಗುಂಪು ಕಟ್ಟಿಕೊಂಡು ಮೆರವಣಿಗೆ ಮೂಲಕ ಉತ್ತರ ಪ್ರದೇಶದ ಹತ್ರಾಸ್​ ಗ್ರಾಮಕ್ಕೆ ಭೇಟಿನೀಡಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಹೋಗುತ್ತಿದ್ದ ಸಂದರ್ಭದಲ್ಲಿ ಭಾರಿ ಗಲಾಟೆಯಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ.

    19 ವರ್ಷದ ಯುವತಿಯ ಮೇಲೆ ಆಗಿರುವ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬವನ್ನು ಭೇಟಿಯಾಗಲು ಮೆರವಣಿಗೆ ಮೂಲಕ ಕಾಂಗ್ರೆಸ್​ ಕಾರ್ಯಕರ್ತರು ಹೋಗುತ್ತಿದ್ದರು. ದಾರಿಯುದ್ದಕ್ಕೂ ಕಾಂಗ್ರೆಸ್​ ಕಾರ್ಯಕರ್ತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.

   ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಹೆದ್ದಾರಿಯಲ್ಲಿ (ಯಮುನಾ ಎಕ್ಸ್​ಪ್ರೆಸ್​ ವೇ) ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ. ಲಾಠಿಚಾರ್ಜ್​ ವೇಳೆ ರಾಹುಲ್​ ಗಾಂಧಿಯವರು ನೆಲಕ್ಕೆ ಬಿದ್ದಿರುವುದಾಗಿ ವರದಿಯಾಗಿದೆ.

   ಮೊದಲು ಎಲ್ಲರೂ ಕಾರಿನಲ್ಲಿ ಬರುತ್ತಿದ್ದರು. ಆದರೆ ಪೊಲೀಸರು ಅವರನ್ನು ಮಾರ್ಗಮಧ್ಯೆಯೇ ತಡೆದರು. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಹಾಗೂ ಭಾರಿ ಗುಂಪು ನಡೆದುಕೊಂಡು ಬರಲು ಶುರುಮಾಡಿತು. ಬೃಹತ್​ ಗುಂಪು ಇದ್ದುದರಿಂದ ಯಾವುದೇ ಕ್ಷಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಬಹುದು ಎಂದು ಅರಿತ ಪೊಲೀಸರು ಅವರನ್ನು ಅಲ್ಲಿಯೇ ತಡೆದು ಮುಂದುವರೆಯಲು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್​ ಹಾಗೂ ಪ್ರಿಯಾಂಕಾ ನೇತೃತ್ವದ ಗುಂಪು ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ.

    ಈ ಕುರಿತು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿರುವ ಅಕ್ಕ-ಅಮ್ಮ, ಪೊಲೀಸರು ನನ್ನನ್ನು ತಳ್ಳಿದರು, ಲಾಠಿಚಾರ್ಜ್ ಮಾಡಿ ನನ್ನನ್ನು ನೆಲಕ್ಕೆ ಬೀಳಿಸಿದರು. ನಾನು ಕೇಳಲು ಬಯಸುತ್ತೇನೆ, ಮೋದಿಜಿ ಮಾತ್ರ ಈ ದೇಶದಲ್ಲಿ ನಡೆಯಲು ಸಾಧ್ಯವೇ? ಸಾಮಾನ್ಯ ವ್ಯಕ್ತಿ ನಡೆಯಲು ಸಾಧ್ಯವಿಲ್ಲವೇ? ನಮ್ಮ ವಾಹನವನ್ನು ನಿಲ್ಲಿಸಲಾಯಿತು, ಆದ್ದರಿಂದ ನಾವು ನಡೆಯಲು ಪ್ರಾರಂಭಿಸಿದೆವು’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

    ಕರೊನಾ ವೈರಸ್​ ಹಿನ್ನೆಲೆಯಲ್ಲಿ ಇಷ್ಟೊಂದು ಮಂದಿಯ ಗುಂಪು ಬರುವುದು ಸರಿಯಲ್ಲ ಎಂದು ತಾವು ತಡೆದಿರುವುದಾಗಿ ಪೊಲೀಸರು ಹೇಳಿದರು. ಈ ನಡುವೆ, ಸಮಾಜವಾದಿ ಪಕ್ಷವು ಹತ್ರಾಸ್ ಗಡಿಯಲ್ಲಿ ಪ್ರತಿಭಟನೆ ನಡೆಸಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ